ಸುಳ್ಯ: ಉಳುವಾರು ಕುಟುಂಬಸ್ಥರ ಆಶ್ರಯದಲ್ಲಿ ಹತ್ತು ಕುಟುಂಬ, ಹದಿನೆಂಟು ಗೋತ್ರದ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಕುಟುಂಬವಾರು ಆಹ್ವಾನಿತ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟವು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡುವಿನಲ್ಲಿ ನಡೆಯಿತು.
ಕುಟುಂಬವಾರು ಕ್ರಿಕೆಟ್ ಪಂದ್ಯಾಟದಲ್ಲಿ ಉಳುವಾರು ಕುಟುಂಬ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ಸ್ ಪ್ರಶಸ್ತಿಯನ್ನು ಮೇಲ್ ಚೆಂಬು ಕುಟುಂಬಸ್ಥರು ಪಡೆದುಕೊಂಡರು.
ಸೆಮಿಫೈನಲ್ಸ್ ನಲ್ಲಿ ಮೇಲ್ ಚೆಂಬು ಕುಟುಂಬವು ದೇರಜೆ ಕುಟುಂಬವನ್ನು ಸೋಲಿಸಿ ಪೈನಲ್ ಪ್ರವೇಶಿಸಿದರೆ, ಆತಿಥೇಯ ಉಳುವಾರು ಕುಟುಂಬವು ಅಮೆಮನೆ ತಂಡವನ್ನು ಮಣಿಸಿ ಪೈನಲ್ ಪ್ರವೇಶಿಸಿದವು. ಪೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉಳುವಾರು ಕುಟುಂಬವು ನಿಗದಿತ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ ಮೇಲ್ ಚೆಂಬು ಕುಟುಂಬವು 5 ವಿಕೆಟ್ ನಷ್ಟಕ್ಕೆ 41ರನ್ ಗಳಿಸಿ 3 ರನ್ ಗಳ ಸೋಲು ಅನುಭವಿಸಿತು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕಾಯರ ಕುಟುಂಬಸ್ಥರು ಪ್ರಥಮ ಸ್ಥಾನ ಹಾಗೂ ಕುರುಂಜಿ ಕುಟುಂಬಸ್ಥರು ದ್ವಿತೀಯ ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ಪ್ರಶಾಂತ್ ಊರುಬೈಲು ಮತ್ತು ಪ್ರದೀಪ ಕುಂಬಳಚೇರಿ ಕಾರ್ಯ ನಿರ್ವಹಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ್ ಕುತ್ತಮಟ್ಟೆ, ದಯಾನಂದ ಕುರುಂಜಿ, ಅಯ್ಯಣ್ಣ ಉಳುವಾರು, ಲೋಕನಾಥ ಸಣ್ಣಮನೆ, ಪುನೀತ ಕೂಸಪ್ಪ ಸಣ್ಣಮನೆ, ಹುಕ್ರಪ್ಪಗೌಡ, ಸುಮಿತ್ರಗೌಡ ಉಳುವಾರು, ದಮಯಂತಿ ಕೇಶವಗೌಡ ಉಳುವಾರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…