ಋಣಮುಕ್ತ ಕಾಯಿದೆ ಅನುಷ್ಠಾನ ಮಾಡುವ ಇಚ್ಛಾಶಕ್ತಿ ತೋರ್ಪಡಿಸಿ-ಎಂ.ಬಿ.ಸದಾಶಿವ

November 18, 2019
8:01 PM

ಸುಳ್ಯ: ರಾಜ್ಯದಲ್ಲಿ ಋಣಮುಕ್ತ ಕಾಯಿದೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ತೋರ್ಪಡಿಸಲಿ ಎಂದು ಜಿಲ್ಲಾ ಋಣಮುಕ್ತ ಕಾಯಿದೆ ಅನುಷ್ಠಾನ ಕ್ರಿಯಾ ಸಮಿತಿಯ ಅಧ್ಯಕ್ಷ ಎಂ.ಬಿ.ಸದಾಶಿವ ಆಗ್ರಹಿಸಿದ್ದಾರೆ.

Advertisement
Advertisement

ಋಣಮುಕ್ತ ಕಾಯಿದೆ ಅನುಷ್ಠಾನ ಕ್ರಿಯಾ ಸಮಿತಿಯ ವತಿಯಿಂದ ಸುಳ್ಯದಲ್ಲಿ ನಡೆದ ವಿವಿಧ ಕಿರು ಹಣಕಾಸು ಸಂಸ್ಥೆಗಳ ಸಾಲಗಾರ ಸದಸ್ಯರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಿರು ಹಣಕಾಸು ಸಂಸ್ಥೆಗಳನ್ನು ಋಣಮುಕ್ತ ಕಾಯಿದೆಯಡಿಯಲ್ಲಿ ತರಬೇಕು, ಕಿರು ಹಣಕಾಸು ಸಂಸ್ಥೆಗಳಿಂದ ಮಹಿಳೆಯರು ಮತ್ತು ಬಡವರು ಪಡೆದ ಎಲ್ಲಾ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಿ ಇವರನ್ನು ಋಣ ಮುಕ್ತರನ್ನಾಗಿ ಮಾಡಬೇಕು. ಜೊತೆಗೆ ಸರಕಾರವು ಎನ್‍ಆರ್ ಎಲ್ ಎಂ ಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಗುಂಪು ಸಾಲಗಳನ್ನು ನೀಡುವ ವ್ಯವಸ್ಥೆ ಆಗಬೇಕು ಎಂದು ಅವರು ಒತ್ತಾಯಿಸಿದರು.

ಈಗ ಆರ್ಥಿಕ ಹಿಂಜರಿತದಿಂದ ಉದ್ಯೋಗ, ಆದಾಯ ಇಲ್ಲದೆ ಕಿರು ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರು ಪಾವತಿ ಮಾಡಲಾಗದೆ ಜನರು ಹತಾಶೆಯಲ್ಲಿದ್ದಾರೆ. ಹಾಗಿದ್ದರೂ ಕಿರು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಕ್ರಮ ಅಮಾನವೀಯವಾಗಿದೆ. ಇದನ್ನು ನಿಯಂತ್ರಿಸಬೇಕು ಎಂದು ಅವರು ಹೇಳಿದರು. ಎನ್‍ಆರ್ ಎಲ್ ಎಂ ಯೋಜನೆಯ ಬಗ್ಗೆ ಮಾಹಿತಿ ನೀಡಲು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸುಳ್ಯ ತಾಲೂಕಿನಲ್ಲಿ ನಾಲ್ಕು ಕಡೆಗಳಲ್ಲಿ ಸಭೆ ನಡೆಸಲಾಗುವುದು ಎಂದರು.

ಸಿಪಿಐಎಂ ಮುಖಂಡ ಬಿ.ಎಂ.ಭಟ್ ಸಮಾವೇಶವನ್ನು ಉದ್ಘಾಟಿಸಿ ಋಣ ಮುಕ್ತ ಕಾನೂನಿನ ಕುರಿತು ಮಾಹಿತಿ ನೀಡಿದರು. ಋಣ ಮುಕ್ತ ಕಾನೂನು ಯಶಸ್ವಿಯಾಗಿ ಅನುಷ್ಠಾನ ಆಗಿ ಬಡ ಮತ್ತು ಮಧ್ಯಮ ವರ್ಗದ ಜನರು ಸಂಪೂರ್ಣ ಋಣ ಮುಕ್ತರಾಗಿಸುವ ನೆಲೆಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಸಂಚಾಲಕ ಅಶೋಕ್ ಎಡಮಲೆ ಮಾತನಾಡಿ `ಋಣಮುಕ್ತ ಕಾಯಿದೆ ಅನುಷ್ಠಾನಕ್ಕೆ ಮತ್ತು ಸಾಲದ ಶೂಲದಿಂದ ಹೊರ ಬರಲು ಜನರು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ದಲಿತ ಸಂಘರ್ಷ ಸಮಿತಿಯ ಮುಖಂಡ ಆನಂದ ಬೆಳ್ಳಾರೆ, ಪ್ರಮುಖರಾದ ಸಚಿನ್ ರಾಜ್ ಶೆಟ್ಟಿ, ಡಿ.ಎಂ.ಶಾರೀಖ್, ಮಜೀದ್, ನೇಮಿರಾಜ್, ಮಂಜುನಾಥ್, ಇಸ್ಮಾಯಿಲ್, ಮಹಾಬಲ ರೈ, ರಝಾಕ್ ಮಾತನಾಡಿದರು. ಋಣಮುಕ್ತ ಕಾಯಿದೆ ಅನುಷ್ಠಾನ ಕ್ರಿಯಾ ಸಮಿತಿಯ ಸುಳ್ಯ ತಾಲೂಕು ಸಂಚಾಲಕ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಶಿ ಆದಿತ್ಯ ಯೋಗ, ಈ 5 ರಾಶಿಗೆ ಬೇಡವೆಂದರೂ ಲಾಭ..!
May 28, 2025
11:04 AM
by: ದ ರೂರಲ್ ಮಿರರ್.ಕಾಂ
ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ
May 27, 2025
10:57 PM
by: ದ ರೂರಲ್ ಮಿರರ್.ಕಾಂ
ಕೇರಳದಾದ್ಯಂತ ತೀವ್ರಗೊಂಡ ನೈಋತ್ಯ ಮಾನ್ಸೂನ್ | ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆ | ಆಲುವಾ ಶಿವ ದೇವಾಲಯದಲ್ಲಿ ನೀರು |
May 27, 2025
1:31 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 27-05-2025 | ಜೂ.3 ರವರೆಗೂ ಮಳೆ | ಮೇ.28 ರಿಂದ ಮತ್ತೆ ಮಳೆ ಚುರುಕು | ಮಳೆಯ ತೀವ್ರತೆ ಕಡಿಮೆ |
May 27, 2025
12:41 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group