ಸುಳ್ಯ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಎಂ.ಬಿ.ಸದಾಶಿವ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಯುವಜನರ ಪರವಾಗಿ ಧ್ವನಿ ಎತ್ತಲು, ಯುವಜನರ ಏಳಿಗೆಗೆ ಮತ್ತು ಯುವಜನ ಸಂಯುಕ್ತ ಮಂಡಳಿ, ಯುವಕ ಮಂಡಲಗಳಿಗೆ ಸೂಕ್ತ ಸಹಾಯ ದೊರಕಿಸುವ ಸಲುವಾಗಿ ಯುವಜನರ ಪ್ರತಿನಿಧಿಯಾಗಿ ಎಂ.ಬಿ.ಸದಾಶಿವ ಅವರಿಗೆ ಎಂಎಲ್ಸಿ ಸ್ಥಾನ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲಾಗುವುದು. ಇದಕ್ಕಾಗಿ ನಿಯೋಗ ತೆರಳಿ ಜೆಡಿಎಸ್ ವರಿಷ್ಠರನ್ನು ಮತ್ತು ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ, ವಿಷಯಗಳನ್ನು ಆಳವಾಗಿ ಅಧ್ಯಯನ ನಡೆಸುವ, ಪ್ರಖರ ವಾಗ್ಮಿ, ನಿರೂಪಕ, ಲೇಖಕ, ಸಂಘಟಕ ಎಂಬ ನೆಲೆಯಲ್ಲಿಯೂ ಹೆಸರು ಮಾಡಿರುವ ಎಂಬಿ ಸದಾಶಿವ ಅವರನ್ನು ಎಂಎಲ್ಸಿ ಮಾಡಿದಲ್ಲಿ ಕರಾವಳಿಗೆ ಜಿಲ್ಲೆಗೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಅವರು ಹೇಳಿದರು.
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅರಣ್ಯ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024025 ನೇ ಸಾಲಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ…
ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ,…
ಈಗಿನಂತೆ ಈ ಮಳೆಯು ನವೆಂಬರ್ 4ರ ವರೆಗೆ ಮುಂದುವರಿಯುವ ಲಕ್ಷಣಗಳಿವೆ.
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಗೆ ದೀಪವೇ ವಿಶೇಷ. ವಿವಿಧ ವಿನ್ಯಾಸದ ಬಣ್ಣದ ದೀಪಗಳನ್ನು…