ಸುಳ್ಯ: ಇಂಡಿಯನ್ ಮುಸ್ಲಿಂ ಲೀಗ್ ಅಧೀನದಲ್ಲಿರುವ ಈ ಸಂಸ್ಥೆಯು ಕಳೆದ ವರ್ಷ 50 ಜೋಡಿ ಸಾಮೂಹಿಕ ವಿವಾಹವನ್ನು ನೇರವೆರಿಸಿ ಈ ವರ್ಷ 100 ಜೋಡಿ ವಿವಾಹದಲ್ಲಿ ಹಿಂದು ಮುಸ್ಲಿಂ ಕ್ರೆಸ್ತ ರನ್ನು ಒಳಗೊಂಡು ಭಾರತೀಯ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ. ಇದು ಇತರರಿಗೆ ಪ್ರೇರಣೆಯಾಗಲಿ. ಈ ಸಂಸ್ಥೆಗೆ ಕನ್ನಡ ರಾಜ್ಯೊತ್ಸವ ಪ್ರಶಸ್ತಿ ದೊರೆಯುವಂತಾಗಲಿ ಎಂದು ರಾಜೀವ್ ಯೂತ್ ರಾಜ್ಯಾಧ್ಯಕ್ಷ ಟಿ.ಎಮ್ .ಶಹೀದ್ ತೆಕ್ಕಿಲ್ ಹೇಳಿದರು.
ಅವರು ಆಲ್ ಇಂಡಿಯಾ ಕೇರಳ ಮುಸ್ಲಿ ಕಲ್ಚರಲ್ ಸೆಂಟ್ರಲ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 100ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು . ಈ ಸಂದರ್ಭದಲ್ಲಿ ಸಯ್ಯದ್ ಪಾಣಕ್ಕಾಡ್ ಶಿಹಾಬ್ ತಂಙಳ್ , ಸಯ್ಯದ್ ಪಾಣಕ್ಕಾಡ್ ಮುನವ್ವರಾಲಿ ತಂಙಳ್ , ಸಯ್ಯದ್ ಪಾಣಕ್ಕಾಡ್ ಸಾದಿಕ್ ಅಲಿ ತಂಙಳ್, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ, ಸಂಸತ್ ಸದಸ್ಯ ಕುಂಞಾಲಿ ಕುಟ್ಟಿ, ಶಾಸಕರಾದ ಯು.ಟಿ.ಖಾದರ್, ಯನ್.ಎ.ಹಾರೀಸ್, ಕೆ.ಎಮ್ .ಸಿ.ಸಿ. ನಾಯಕರಾದ ನೌಶಾದ್, ಸಲೀಂ ಟರ್ಲಿ, ಸಂಸುದ್ದೀನ್ ಅರಂತೋಡು, ತಾಜುದ್ದೀನ್ ಟರ್ಲಿ, ತಾಜುದ್ದೀನ್ ಅರಂತೋಡು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ರಾಜ್ಯದ ಕೆಲವು ಕಡೆ ಮಳೆ ಕಡಿಮೆ ಇದ್ದು, ಮುಂದಿನ 7 ದಿನಗಳ ಹವಾಮಾನ…
ಪ್ರೇಮ ಸಂಬಂಧವು ಭಾವನಾತ್ಮಕ ಸಾಮರಸ್ಯ, ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ.…
ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…