ಎಚ್.ಭೀಮರಾವ್ ವಾಷ್ಠರ್ ನಿರ್ದೇಶನದ “ಪರಿವರ್ತನೆ” ಚಲನಚಿತ್ರ ಬಿಡುಗಡೆ

June 22, 2019
9:22 PM
ಸುಳ್ಯ: ವಿಜಯಪುರ , ಮಹಾರಾಷ್ಟ್ರದ   ಪಂಡರಪುರ  ಮತ್ತು ಕುಷ್ಟಗಿಯಲ್ಲಿ  ಚಿತ್ರೀಕರಣಗೊಂಡ  ಪರಿವರ್ತನೆ  ಚಲನಚಿತ್ರ ಬಿಡುಗಡೆ ಸಮಾರಂಭವು ಸುಳ್ಯದ  ಚರ್ಚ್  ಶಾಲೆಯ ಸಭಾಂಗಣದಲ್ಲಿ  ನಡೆಯಿತು.
ಸುಳ್ಯದ ಸಾಹಿತಿ ಮತ್ತು ಜ್ಯೋತಿಷಿಯಾದ ಎಚ್.ಭೀಮರಾವ್ ವಾಷ್ಠರ್ ಅವರು  ಕತೆ ,ಚಿತ್ರಕತೆ , ಸಂಭಾಷಣೆ , ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದ ಈ ಚಲನ ಚಿತ್ರವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು  ಚಿತ್ರದ ಪಣಿಕ್ಕರ್ ಪಾತ್ರದ ಖ್ಯಾತ ಚಿತ್ರನಟ ಬಾಲಕೃಷ್ಣ  ಮೇಸ್ಟ್ರು ಸಮಾರಂಭದ ಅಧ್ಯಕ್ಷತೆ  ವಹಿಸಿ ಬಿಡುಗಡೆ ಮಾಡಿದರು.
ಭಾವನಾ ಮೀಡಿಯಾ ಅರ್ಪಿಸುವ  9 ನೇ ಕಾಣಿಕೆಯ  ಈ  ಪರಿವರ್ತನೆ ಚಿತ್ರ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು  ಚರ್ಚ್ ಶಿಕ್ಷಣ ಸಂಸ್ಥೆಗಳ  ಸಂಚಾಲಕರಾದ ರೇ|ಫಾ |ವಿಕ್ಟರ್  ಡಿಸೋಜಾ  ಅವರು ನೆರವೇರಿಸಿದರು. ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ ಸಂತ ಜೋಷೆಫ್  ಶಾಲೆಯ 5 ನೇ ತರಗತಿಯ  ವಿದ್ಯಾರ್ಥಿ ಉಜ್ವಲ್ ವಾಷ್ಠರ್ ರಿಗೆ ಟ್ವಿಂಕಲ್ ಸ್ಟಾರ್   ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಧರ್ಮಗುರುಗಳಾದ ವಿಕ್ಟರ್ ಡಿಸೋಜಾ ಮತ್ತು ಚಿತ್ರನಟ ಬಾಲಕೃಷ್ಣ ಅಡೂರ್ ಅವರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕರಾದ ಚಂದ್ರಶೇಖರ್ , ವಿಷ್ಣುವರ್ಧನ್ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಂಡಿತ್ , ಯೋಗೇಶ್ವರಾನಂದ  ಸ್ವಾಮಿ , ಭ್ರಷ್ಟಾಚಾರ ಮತ್ತು ಅಪರಾಧ ನಿಗ್ರಹ   ಪತ್ತೆದಳದ ರಾಜ್ಯಅಧ್ಯಕ್ಷರಾದ  ಪ್ರಶಾಂತ್ ರೈ ಮರವಂಜ , ಸುಜಯ ಕೃಷ್ಣಪ್ಪ ,ಶಿಕ್ಷಕಿ ಪ್ರಭಾ, ಮುಖ್ಯೋಪಾಧ್ಯಾರಾದ  ಸಿ|ಬಿನೋಮಾ  ಭಾಗವಹಿಸಿದ್ದರು.
 ಚಿತ್ರನಟರಾದ ಜೂನಿಯರ್ ಪ್ರಭಾಕರ್ , ಭಾಸ್ಕರ್  ಮಂಜೇಶ್ವರ್ , ನಟರಾಜ್ ಮಾಸ್ಟರ್ , ಗುರುಪ್ರಸಾದ್ ರೈ , ತುಳಸಿ , ಜಯಂತಿ ಸುವರ್ಣ ,ಚೇತನ್ ಗಬ್ಬಲಡ್ಕ , ವಿಜೇತ್ ಅಡ್ಯಡ್ಕ  ಪ್ರವೀಣಾ  ಪ್ರಶಾಂತ್ ರೈ ಇನ್ನಿತರರು ಉಪಸ್ಥಿತರಿದ್ದರು. ಎಚ್. ಭೀಮರಾವ್ ವಾಷ್ಠರ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವಿನಯ್ ಮತ್ತು ಅನಿಲ್  ಡಿಸೋಜಾ ಸಹಕರಿಸಿದರು. ನಂತರ ಒಂದೂವರೆ  ಗಂಟೆಯ  ಪರಿವರ್ತನೆ ಚಿತ್ರವನ್ನು ಪ್ರದರ್ಶನ ಮಾಡಲಾಯಿತು. ಸುಮಾರು 500 ಕ್ಕೂ ಹೆಚ್ಚು ಮಕ್ಕಳು ಚಿತ್ರ ವೀಕ್ಷಿಸಿದರು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ
February 24, 2025
10:16 PM
by: The Rural Mirror ಸುದ್ದಿಜಾಲ
ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror