ಎಣ್ಮೂರು : ಎಣ್ಮೂರು ಸರಕಾರಿ ಪ್ರೌಡಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಅನ್ನ ನೀಡುವ ಭತ್ತದ ಬೇಸಾಯದ ನೇಜಿ ನಾಟಿ ಕುರಿತು ತಿಳುವಳಿಕೆ ನೀಡುವ ಶಿಕ್ಷಣದೊಂದಿಗೆ ನೇಜಿ ಕೃಷಿ ಪಾಠ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
Advertisement
ಶಾಲಾ ಎಸ್‍ಡಿಎಂಸಿ ಮಾಜಿ ಅದ್ಯಕ್ಷ ಸೋಮಪ್ಪ ಗೌಡ ಕುಳ್ತಿಗೆ ನೇಜಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಭತ್ತದಿಂದ ಅಕ್ಕಿ ತಯಾರಿಸುವ ವಿಧಾನ ಮತ್ತು ಸಾವಯುವ ಜೀನನಾಂಶಕ ಅಕ್ಕಿಯ ಮಹತ್ವದ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶೀತಲ್ ಭತ್ತ ಬೇಸಾಯದಲ್ಲಿ ಗದ್ದೆ ಹದಗೊಳಿಸುವ ನಾಟಿ ನೆಡುವ ವಿಧಾನಗಳ ಕುರಿತು ಮಾಹಿತಿ ಒದಗಿಸಿದರು. ಅಕ್ಷರಾ ದಾಸೋಹ ಸಿಬಂದಿಗಳಾದ ಪ್ರೇಮ ಪರ್ಲಡ್ಕ, ಪ್ರಮೀಳಾ ರೈ ಕಸ್ತೂರಿ ಪಾಡ್ದನ ಹಾಡಿ ಬಾಲ ರೈತ ಮಕ್ಕಳ ಗಮನ ಸೆಳೆದರು.
Advertisement
ಶಿಕ್ಷಕರಾದ ದಿವ್ಯಾ ಎಂ.ಕೆ,ಉಷಾ ಕೆ.ಎಸ್ ಸಂತೋಷ್ ಮಕ್ಕಳ ಜತೆ ನಾಟಿ ಕಾರ್ಯದಲ್ಲಿ ಸಹಕರಿಸಿದರು. ಶಿಕ್ಷಕ ಮೋಹನ ಗೌಡ ಎ ಸ್ವಾಗತಿಸಿ ಜೆಸಿಂತಾ ಮೊಂತೇರೋ ವಂದಿಸಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement