ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ | ಗ್ರಾಮೀಣ ಮಟ್ಟದಲ್ಲೂಅಡಿಕೆ ಖರೀದಿ ನಡೆಸಲು ಬೆಳೆಗಾರರಿಂದ ಬೇಡಿಕೆ |

April 22, 2020
3:25 PM

ಸುಳ್ಯ: ಈಗಾಗಲೇ ಪುತ್ತೂರು ಹಾಗೂ ಸುಳ್ಯ ಎಪಿಎಂಸಿ ಯಲ್ಲಿ ಅಡಿಕೆ ಖರೀದಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಿಂದ ಸುಳ್ಯ ಎಪಿಎಂಸಿಯಲ್ಲಿ  ಅಡಿಕೆ ಖರೀದಿ ಆರಂಭಗೊಂಡಿದೆ.  ಇದೀಗ ಗ್ರಾಮಮಟ್ಟದಲ್ಲಿ ಲಾಕ್ಡೌನ್ ನಿಯಮದೊಂದಿಗೆ  ಅಡಿಕೆ ಖರೀದಿಗೆ ವ್ಯವಸ್ಥೆ ಆಗಬೇಕು ಎಂದು ಈಗ ಬೆಳೆಗಾರರಿಂದ ಒತ್ತಾಯ ಕೇಳಿಬಂದಿದೆ.

Advertisement
Advertisement

 

ಈಗಾಗಲೇ ರಾಜ್ಯದಲ್ಲಿ  ಮೇ.3 ರವರೆಗೆ ಲಾಕ್ಡೌನ್ ಮುಂದುವರಿಸಲಾಗಿದೆ. ಅಡಿಕೆ ಬೆಳೆಗಾರರಿಗೆ ಯಾವುದೇ ಕೃಷಿ ಉತ್ಪನ್ನ ಮಾಡಲಾಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಬಹುಪಾಲು ಕೃಷಿಕರು ಅಡಿಕೆ ಕೃಷಿಯನ್ನೇ ನಂಬಿದ್ದರೆ, ಸುಳ್ಯ, ಬೆಳ್ತಂಗಡಿ ಪ್ರದೇಶದಲ್ಲಿ ರಬ್ಬರ್ ಕೂಡಾ ಪ್ರಮುಖ ಬೆಳೆ. ಇದೀಗ ಕ್ಯಾಂಪ್ಕೋ ಅಡಿಕೆ ಖರೀದಿ ಮಾಡುತ್ತಿದೆ.  ಆದರೆ ಸೀಮಿತ ಶಾಖೆಗಳಲ್ಲಿ  ಮಾತ್ರವೇ ಅಡಿಕೆ ಖರೀದಿ ನಡೆಸುವುದರಿಂದ ಎಲ್ಲಾ ಬೆಳೆಗಾರರಿಗೆ ಅಡಿಕೆ ಮಾರಾಟ ಮಾಡಲು ಆಗುತ್ತಿಲ್ಲ.  ಇದೀಗ ಎಪ್ರಿಲ್ ಅಂತ್ಯವಾಗುತ್ತಾ ಬಂದಿದೆ. ಅನೇಕ ಕೃಷಿ ಕೆಲಸಗಳು ಬಾಕಿ ಉಳಿದಿದೆ, ಅಡಿಕೆ ಮಾರಾಟ ಮಾಡದೆ ಹಣ ಇಲ್ಲದ ಸ್ಥಿತಿ ಬಹುಪಾಲು ಬೆಳೆಗಾರರಿಗೆ ಇದೆ. ಈ ಕಾರಣದಿಂದ ಮಳೆಗಾಲದ ಮುನ್ನ ಕೃಷಿ ಕಾರ್ಯ ಮುಗಿಯದು. ಹೀಗಾಗಿ ಈಗ ಅಡಿಕೆ ಮಾರಾಟಕ್ಕೆ ವ್ಯವಸ್ಥೆ ಬೇಕಾಗಿದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದಾರೆ.

ಈಗ ಲಾಕ್ಡೌನ್ ಇರುವುರಿಂದ ಗ್ರಾಮದ ಹೊರಗೆ ಜನರು ಹೋಗದಂತೆ ತಡೆಯಬೇಕು ಎಂದು ಸರಕಾರವೇ ಹೇಳುತ್ತದೆ. ಇಂತಹ ಸಂದರ್ಭದಲ್ಲಿ  ಅಡಿಕೆಯನ್ನು  ದೂರ ಊರಿಗೆ ಕೊಂಡೊಯ್ಯುವುದು ಹೇಗೆ ? ಎಂಬ ಪ್ರಶ್ನೆ ಇದೆ. ಇದಕ್ಕಾಗಿ ಗ್ರಾಮಮಟ್ಟದಲ್ಲೂ ಸಾಮಾಜಿಕ ಅಂತರ ಹಾಗೂ ನಿಯಮಗಳೊಂದಿಗೆ ಎಪಿಎಂಸಿ ತೆರಿಗೆ, ಜಿಎಸ್ಟಿ ಸಹಿತವಾಗಿ ಇರುವ ವ್ಯಾಪಾರಿಗಳೂ ಅಡಿಕೆ ಖರೀದಿ ನಡೆಸಿದರೆ ಕೃಷಿಕರಿಗೆ ಉಪಕಾರಿಯಾಗಲಿದೆ ಅಲ್ಲದೆ ಕ್ಯಾಂಪ್ಕೋ ಸಂಸ್ಥೆಗೂ ಹೊರೆ ತಪ್ಪಲಿದೆ ಎಂಬುದು ಅಡಿಕೆ ಬೆಳೆಗಾರರ ಅಭಿಮತ. ಅದಿಕಾರಿಗಳು, ಸರಕಾರ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಾಧನೆಗಿಂತ ದೊಡ್ಡದು ಸಂಯಮ
February 16, 2026
7:56 AM
by: ದ ರೂರಲ್ ಮಿರರ್.ಕಾಂ
ತೆಂಗಿನ ರೈತರಿಗೆ ಆಶಾಕಿರಣ | ರೋಗ ನಿಯಂತ್ರಣ ಮತ್ತು ಹೊಸ ತಳಿ ಯೋಜನೆ
February 16, 2026
7:34 AM
by: ದ ರೂರಲ್ ಮಿರರ್.ಕಾಂ
ಎಳನೀರು ಸಂಕಷ್ಟ | ಉತ್ಪಾದನೆ ಕುಸಿತದಿಂದ ಸರಬರಾಜಿಗೆ ಹೊಡೆತ..!
February 16, 2026
7:11 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರ ಮೌನ : ಜಾಗತಿಕ ಎಚ್ಚರದ ಘಂಟೆ ಮೊಳಗುತ್ತಿದ್ದರೂ ಏಕೆ ನಿರಾಳತೆ?
February 15, 2026
10:56 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror