ಸುಳ್ಯ: ಈಗಾಗಲೇ ಪುತ್ತೂರು ಹಾಗೂ ಸುಳ್ಯ ಎಪಿಎಂಸಿ ಯಲ್ಲಿ ಅಡಿಕೆ ಖರೀದಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಿಂದ ಸುಳ್ಯ ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭಗೊಂಡಿದೆ. ಇದೀಗ ಗ್ರಾಮಮಟ್ಟದಲ್ಲಿ ಲಾಕ್ಡೌನ್ ನಿಯಮದೊಂದಿಗೆ ಅಡಿಕೆ ಖರೀದಿಗೆ ವ್ಯವಸ್ಥೆ ಆಗಬೇಕು ಎಂದು ಈಗ ಬೆಳೆಗಾರರಿಂದ ಒತ್ತಾಯ ಕೇಳಿಬಂದಿದೆ.
ಈಗಾಗಲೇ ರಾಜ್ಯದಲ್ಲಿ ಮೇ.3 ರವರೆಗೆ ಲಾಕ್ಡೌನ್ ಮುಂದುವರಿಸಲಾಗಿದೆ. ಅಡಿಕೆ ಬೆಳೆಗಾರರಿಗೆ ಯಾವುದೇ ಕೃಷಿ ಉತ್ಪನ್ನ ಮಾಡಲಾಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಪಾಲು ಕೃಷಿಕರು ಅಡಿಕೆ ಕೃಷಿಯನ್ನೇ ನಂಬಿದ್ದರೆ, ಸುಳ್ಯ, ಬೆಳ್ತಂಗಡಿ ಪ್ರದೇಶದಲ್ಲಿ ರಬ್ಬರ್ ಕೂಡಾ ಪ್ರಮುಖ ಬೆಳೆ. ಇದೀಗ ಕ್ಯಾಂಪ್ಕೋ ಅಡಿಕೆ ಖರೀದಿ ಮಾಡುತ್ತಿದೆ. ಆದರೆ ಸೀಮಿತ ಶಾಖೆಗಳಲ್ಲಿ ಮಾತ್ರವೇ ಅಡಿಕೆ ಖರೀದಿ ನಡೆಸುವುದರಿಂದ ಎಲ್ಲಾ ಬೆಳೆಗಾರರಿಗೆ ಅಡಿಕೆ ಮಾರಾಟ ಮಾಡಲು ಆಗುತ್ತಿಲ್ಲ. ಇದೀಗ ಎಪ್ರಿಲ್ ಅಂತ್ಯವಾಗುತ್ತಾ ಬಂದಿದೆ. ಅನೇಕ ಕೃಷಿ ಕೆಲಸಗಳು ಬಾಕಿ ಉಳಿದಿದೆ, ಅಡಿಕೆ ಮಾರಾಟ ಮಾಡದೆ ಹಣ ಇಲ್ಲದ ಸ್ಥಿತಿ ಬಹುಪಾಲು ಬೆಳೆಗಾರರಿಗೆ ಇದೆ. ಈ ಕಾರಣದಿಂದ ಮಳೆಗಾಲದ ಮುನ್ನ ಕೃಷಿ ಕಾರ್ಯ ಮುಗಿಯದು. ಹೀಗಾಗಿ ಈಗ ಅಡಿಕೆ ಮಾರಾಟಕ್ಕೆ ವ್ಯವಸ್ಥೆ ಬೇಕಾಗಿದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದಾರೆ.
ಈಗ ಲಾಕ್ಡೌನ್ ಇರುವುರಿಂದ ಗ್ರಾಮದ ಹೊರಗೆ ಜನರು ಹೋಗದಂತೆ ತಡೆಯಬೇಕು ಎಂದು ಸರಕಾರವೇ ಹೇಳುತ್ತದೆ. ಇಂತಹ ಸಂದರ್ಭದಲ್ಲಿ ಅಡಿಕೆಯನ್ನು ದೂರ ಊರಿಗೆ ಕೊಂಡೊಯ್ಯುವುದು ಹೇಗೆ ? ಎಂಬ ಪ್ರಶ್ನೆ ಇದೆ. ಇದಕ್ಕಾಗಿ ಗ್ರಾಮಮಟ್ಟದಲ್ಲೂ ಸಾಮಾಜಿಕ ಅಂತರ ಹಾಗೂ ನಿಯಮಗಳೊಂದಿಗೆ ಎಪಿಎಂಸಿ ತೆರಿಗೆ, ಜಿಎಸ್ಟಿ ಸಹಿತವಾಗಿ ಇರುವ ವ್ಯಾಪಾರಿಗಳೂ ಅಡಿಕೆ ಖರೀದಿ ನಡೆಸಿದರೆ ಕೃಷಿಕರಿಗೆ ಉಪಕಾರಿಯಾಗಲಿದೆ ಅಲ್ಲದೆ ಕ್ಯಾಂಪ್ಕೋ ಸಂಸ್ಥೆಗೂ ಹೊರೆ ತಪ್ಪಲಿದೆ ಎಂಬುದು ಅಡಿಕೆ ಬೆಳೆಗಾರರ ಅಭಿಮತ. ಅದಿಕಾರಿಗಳು, ಸರಕಾರ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…