ಬೆಳ್ಳಾರೆ: ಕಳೆದ ಎರಡು ದಿನಗಳಿಂದ ಮಳೆಯಬ್ಬರ ಹೆಚ್ಚಾಗಿದೆ. ಸೋಮವಾರ ಮುಂಜಾನೆಯಿಂದ ಸುರಿದ ಭಾರಿ ಮಳೆಗೆ ಮುಕ್ಕೂರು ಭಾಗದ ಮಾಪಳ ಮಜಲು ಹೊಳೆಯಲ್ಲಿ ಭಾರಿ ಪ್ರಮಾಣದ ನೀರಿನ ಹರಿವು ಉಂಟಾಗಿದ್ದು ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಸುತ್ತ ಮುತ್ತಲಿನ ಕೃಷಿಕರ ತೋಟಗಳೂ ಜಲಾವೃತ್ತಗೊಂಡಿದ್ದು ಬೆಳೆ ನಾಶವೂ ಆಗಿದೆ.ಹೊಳೆಯ ಆಳದಲ್ಲಿ ಕೆಸರು ತುಂಬಿದ್ದು ಅದನ್ನು ತೆಗೆಯುವ ಕಾರ್ಯ ಅಸಮರ್ಪಕವಾಗಿ ನಡೆದುದರಿಂದ ರಸ್ತೆಯ ಮೇಲೆ ನೀರು ಹರಿಯಲು ಕಾರಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇದೇ ವೇಳೆ ತಾಲೂಕಿನಲ್ಲೂ ಉತ್ತಮವಾದ ಮಳೆಯಾದ ವರದಿಯಾಗಿದೆ. ಕೃಷಿಕರು ಸಂಗ್ರಹಿಸಿದ ಮಳೆ ಲೆಕ್ಕದ ಪ್ರಕಾರ ಸೋಮವಾರ ಬೆಳಗ್ಗೆ ಬಾಳಿಲದಲ್ಲಿ 158 ಮಿಮೀ , ಗುತ್ತಿಗಾರಿನಲ್ಲಿ 113 ಮಿಮೀ , ಕಲ್ಲಾಜೆಯಲ್ಲಿ 135 ಮಿಮೀ , ಕೊಲ್ಲಮೊಗ್ರದಲ್ಲಿ 107 ಮಿಮೀ ಮಳೆಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel