ಎಲಿಮಲೆ- ಮರ್ಕಂಜ-ಅರಂತೋಡು ರಸ್ತೆ ಅಗಲೀಕರಣಕ್ಕಾಗಿ 3 ಕೋಟಿ ಪ್ರಸ್ತಾವನೆ ಕಡತದಲ್ಲಿಯೇ ಬಾಕಿ…?

June 20, 2019
9:00 AM

ಎಲಿಮಲೆ:  ಹಲವು ವರ್ಷಗಳಿಂದ ಅಭಿವೃದ್ಧಿಗಾಗಿ ಕಾಯುತ್ತಿರುವ ಮಡಿಕೇರಿ, ಮೈಸೂರು ಭಾಗಗಳಿಗೆ ನೇರ ಸಂಪರ್ಕ ಕಲ್ಪಿಸುವ ಎಲಿಮಲೆ-ಮರ್ಕಂಜ-ಅರಂತೋಡು ರಸ್ತೆಯ ಅಗಲೀಕರಣ ಕಾಮಗಾರಿ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ.

Advertisement
Advertisement

ಪ್ರಸಿದ್ದ ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಯಾತ್ರಾರ್ಥಿಗಳು ಓಡಾಡುತ್ತಾರೆ. ಮಡಿಕೇರಿ, ಮೈಸೂರುಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅತ್ಯಂತ ಕಡಿದಾಗಿದ್ದು, ಭಾರೀ ವಾಹನಗಳು ಮುಖಾಮುಖಿಯಾದರೆ ದಾರಿ ಬಿಟ್ಟುಕೊಡಲು ಕಷ್ಟವಾಗುತ್ತದೆ. ರಸ್ತೆ ತಿರುವುನಿಂದ ಕೂಡಿದ್ದು, ಎದುರಿನಿಂದ ಬರುವ ವಾಹನಗಳು ಎದುರಾಗಿ ಅಪಘಾತಗಳೂ ಸಂಭವಿಸಿವೆ.

Advertisement

 

 

Advertisement

 

Advertisement

15 ಕಿ.ಮೀ ಉಳಿಕೆ:

ಸುಬ್ರಹ್ಮಣ್ಯಕ್ಕೆ ಹೋಗಲು ಸುಳ್ಯ ಬಳಸಿ ಪ್ರಯಾಣಿಸಿದರೆ ಸುಮಾರು 74 ಕಿ.ಮೀ ಇದ್ದು ಅರಂತೋಡಿನಿಂದ ಅಡ್ತಲೆ ಮರ್ಕಂಜ ಮಾರ್ಗವಾಗಿ ಪ್ರಯಾಣಿಸಿದರೆ ಸುಮಾರು 15 ಕಿಮೀನಷ್ಟು ಉಳಿತಾಯವಾಗುತ್ತದೆ. ಆದ್ದರಿಂದ ಬಹುತೇಕ ಪ್ರವಾಸಿಗರು ಇದೇ ಮಾರ್ಗವನ್ನು ಬಳಸುತ್ತಾರೆ. ಆದರೆ ಇದರಲ್ಲಿ ಪ್ರಯಾಣಿಸುವುದು ಮಾತ್ರ ಬಹಳ ಪ್ರಯಾಸವೇ ಸರಿ.

Advertisement

ಅಗಲೀಕರಣ ಕಡತದಲ್ಲಿಯೇ ಬಾಕಿ:

ಬಹುಪಯೋಗಿ ಎಲಿಮಲೆ- ಮರ್ಕಂಜ -ಅರಂತೋಡು ರಸ್ತೆ ಅಗಲೀಕರಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇದ್ದು 2 ವರ್ಷಗಳ ಹಿಂದೆ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಅನುದಾನ ಮಂಜೂರುಗೊಳ್ಳದೇ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ. ರಸ್ತೆಯನ್ನು ಎಲಿಮಲೆಯಿಂದ ಮರ್ಕಂಜದವರೆಗೆ 5 ಕಿ.ಮೀನಷ್ಟು ಅಗಲೀಕರಣ ಮಾಡಲು ಈ ಹಿಂದೆ ಸಿಆರ್‍ಏಫ್‍ನಿಂದ 3 ಕೋ.ರೂ ಮಂಜೂರುಗೊಂಡು ಟೆಂಡರ್ ಪ್ರಕ್ರಿಯೆ ಕೂಡಾ ಮುಗಿದಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯಬೇಕಿದ್ದ ಈ ಕಾಮಗಾರಿಯ ಟೆಂಡರ್ ಪಡೆದುಕೊಂಡ ಗುತ್ತಿಗೆದಾರ ನಿಧನ ಹೊಂದಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ ಇದೀಗ ಕಾಮಗಾರಿ ಮತ್ತೆ ಪ್ರಾರಂಭಿಸಲು ರಿಟೆಂಡರ್ ಮಾಡಬೇಕಿದೆ.

Advertisement

ಸೇವಾಜೆಯಲ್ಲಿ ನಿರ್ಮಾಣವಾಗಲಿದೆ ಹೊಸ ಸೇತುವೆ:

ಅತ್ಯಂತ ಕಡಿದಾಗಿರುವ ಹಳೆಯ ಸೇತುವೆಯನ್ನು ಕೆಡವಿ ಸೇವಾಜೆಯಲ್ಲಿ ನೂತನ ಸೇತುವೆ ನಿರ್ಮಾಣವಾಗಲಿದೆ. ಇದಕ್ಕಗಿ 2.25 ಕೋಟಿ ರೂ.ಗಳ ಪ್ರಸ್ತಾವನೆ ಮಂಜೂರುಗೊಂಡಿದ್ದು ಕಾಮಗಾರಿ ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಸಣ್ಣೇ ಗೌಡ ತಿಳಿಸಿದ್ದಾರೆ.

Advertisement

 

  • ಕೃಷ್ಣಪ್ರಸಾದ್  ಕೊಲ್ಚಾರ್
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!
May 17, 2024
2:44 PM
by: The Rural Mirror ಸುದ್ದಿಜಾಲ
ಆರೋಗ್ಯ ಕವಚ ಸಿಬಂದಿಗಳಿಗೆ ವೇತನವಾಗಿಲ್ಲ..! | ಗ್ರಾಮೀಣ ಭಾಗದ ಜೀವ ರಕ್ಷಕರು ಅತಂತ್ರದಲ್ಲಿ..!
April 30, 2024
7:15 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ
ತಾಪಮಾನ ಏರಿಕೆಯ ಪರಿಣಾಮ ಏನು ? | ಈ ಬಾರಿಯ ತಾಪಮಾನಕ್ಕೆ ಕೃಷಿಗೆ ಹಾನಿ ಏನು ? | ಕೃಷಿಗೆ ವಿಮೆ ಪರಿಣಾಮವಾದೀತೇ…?
April 16, 2024
10:18 PM
by: ಸಮರ್ಥ ಸಮನ್ಯು

You cannot copy content of this page - Copyright -The Rural Mirror