ಎಲಿಮಲೆ: ವಿದ್ಯಾರ್ಥಿ ಪೋಲೀಸ್ ಕ್ಯಾಡೆಟ್ ಕಾರ್ಯಕ್ರಮದ ಅಂಗವಾಗಿ ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿನ ವಿದ್ಯಾರ್ಥಿಗಳಿಂದ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೊಂದು ಭೇಟಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ್ ಪೇರಾಲು, ಸಹಶಿಕ್ಷಕರಾದ ರಾಜೇಶ್ವರಿ ಕೇನಾಜೆ, ಶಿಕ್ಷಕ ವಸಂತ, ಪೋಲೀಸ್ ಅಧಿಕಾರಿ ಅನಿಲ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಗ್ರಂಥಾಲಯದ ಮಾಹಿತಿ, ಪುಸ್ತಕ ನಿರ್ವಹಣೆ ಮತ್ತು ಓದುವಿಕೆಯ ಮಹತ್ವ ,ಗ್ರಂಥಾಲಯದ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯರು ಮಾತನಾಡಿ ಗ್ರಂಥಾಲಯದ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಗ್ರಾಮ ಪಂಚಾಯತ್ ವತಿಯಿಂದ ಸಭಾಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮುಂಡೋಡಿ , ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಪೇರಾಲು ಗ್ರಾಮ ಪಂಚಾಯತ್ ಪ್ರಭಾರ ಪಿ. ಡಿ. ಓ ಗುರುಪ್ರಸಾದ್, ಸಹಶಿಕ್ಷಕಿ ರಾಜೇಶ್ವರಿ ಸುಂದರ ಕೇನಾಜೆ, ಪೋಲೀಸ್ ಅಧಿಕಾರಿ ಅನಿಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಬಗ್ಗೆ ಮಾಹಿತಿ ಮತ್ತು ಸೌಲಭ್ಯ, ಹಲವಾರು ಯೋಜನೆಗೆಳ ವಿವರಣೆಯನ್ನು ಪಿ. ಡಿ. ಓ. ತಿಳಿಸಿದರು ಮತ್ತು ಮಕ್ಕಳ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಪಂಚಾಯತ್ ಸಿಬ್ಬಂದಿ ವರ್ಗ ಶಾಲೆಯ ಸಹಶಿಕ್ಷಕ ವಸಂತ ಭಾಗವಹಿಸಿದ್ದರು.
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…
ಪಂಚಾಯತು ವಿಧಿಸುವ ವಿವಿಧ ಕರಗಳ ಬಗ್ಗೆ ನಿಮಗೆ ಅರಿವಿದೆಯೆ? ನಿಮ್ಮ ಪಂಚಾಯತುಗಳಿಗೆ ಸರಕಾರದಿಂದ…