ಎಲಿಮಲೆ: ಡಿ. 8ರ ಆದಿತ್ಯವಾರದಂದು ಎಲಿಮಲೆ ಸರಕಾರಿ ಪ್ರೌಢಶಾಲೆ ಇದರ ಹಿರಿಯ ವಿದ್ಯಾರ್ಥಿಗಳ ಸಂಘದ ಮಹಾಸಭೆ ನಡೆಯಿತು. ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಧ್ಯಕ್ಷರಾದ ಗೋಪಿನಾಥ್ ಮೆತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಪೇರಾಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಹಿಂದಿನ ಮತ್ತು ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಹಾಗೆಯೇ ಹೊಸ ಪದಾಧಿಕಾರಿಗನ್ನು ಕೂಡಾ ನೇಮಿಸಲಾಯಿತು.





ಸಂಘದ ನೂತನ ಅಧ್ಯಕ್ಷರಾಗಿ ಕಿರಣ್ ಗುಡ್ಡೆಮನೆ, ಉಪಾಧ್ಯಕ್ಷರಾಗಿ ಹರಿಪ್ರಸಾದ್ ಬಿ. ವಿ ಮತ್ತು ಭಾಸ್ಕರ ಬಾಳೆತೋಟ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ್ ತಳೂರು, ಜತೆ ಕಾರ್ಯದರ್ಶಿಯಾಗಿ ಮುರಳೀಧರ ಪುನ್ಕುಟ್ಟಿ, ಕೋಶಾಧಿಕಾರಿಯಾಗಿ ದೀಕ್ಷಿತ್ ಚಿತ್ತಡ್ಕ, ಮಾಧ್ಯಮ ಸಂಪರ್ಕ ಅಶ್ರಫ್ ಜೀರ್ಮುಕ್ಕಿ ಮತ್ತು ಸದಸ್ಯರಾಗಿ ಓಂ ಪ್ರಕಾಶ್ ಕಜೆ, ತಾರಾನಾಥ ಅಡಿಗೈ, ಕಿಶನ್ ಮಾವಿನಕಟ್ಟೆ, ಸತೀಶ್ ಗುಡ್ಡನಮನೆ, ದಯಾನಂದ ಮೆತ್ತಡ್ಕ, ಲೋಹಿತ್ ಮಾವಿನಗೊಡ್ಲು, ಪ್ರಶಾಂತ್ ಅಂಬೆಕಲ್ಲು, ಸುನಿಲ್ ಸುಳ್ಳಿ, ಸೃಜೇಶ್ ಕಲ್ಲುಪಣೆ, ನಿತಿನ್ ಗಟ್ಟಿಗಾರು, ನೇತ್ರಕಿರಣ ಹರ್ಲಡ್ಕ ಆಯ್ಕೆಯಾದರು.