ಎಲಿಮಲೆ: ಸುಳ್ಯ ತಾಲೂಕು 24 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಎಲಿಮಲೆಯಲ್ಲಿ ವೈಭವದಿಂದ ಆರಂಭಗೊಂಡಿದೆ. ಬೆಳಗ್ಗೆ ಸಮ್ಮೇಳನಾಧ್ಯಕ್ಷ ಕೃ.ಶಾ.ಮರ್ಕಂಜ ಅವರನ್ನು ಮರ್ಕಂಜದಿಂದ ಮೆರವಣಿಗೆಯಲ್ಲಿ ಎಲಿಮಲೆಗೆ ಕರೆತರಲಾಯಿತು. ಎಲಿಮಲೆಯಲ್ಲಿ ಸಮ್ಮೇಳನಾದ್ಯಕ್ಷರನ್ನು ಸ್ವಾಗತಿಸಿದ ಬಳಿಕ ಕನ್ನಡ ಭುವನೇಶ್ವರಿಯ ಮೆರವಣಿಗೆ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ತಾ.ಪಂ. ಸದಸ್ಯೆ ಯಶೋಧಾ ಬಾಳೆಗುಡ್ಡೆ ಮೆರವಣಿಗೆ ಉದ್ಘಾಟಿಸಿದರು.
ಬಳಿಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕನ್ನಡ ಭುವನೇಶ್ವರಿ , ವಿದ್ಯಾರ್ಥಿಗಳು, ಯಕ್ಷಗಾನ ವೇಷಗಳು ಸೇರಿದಂತೆ ವಿವಿಧ ಕಲಾಪ್ರಕಾರಗಳು ಮೆರುಗು ನೀಡಿತು.
ಸಮ್ಮೇಳನವು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ, ಎಲಿಮಲೆ ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel