ಸುಳ್ಯ: ನದಿ ಯಾವತ್ತೂ ಒಬ್ಬರ ಸ್ವತ್ತಲ್ಲ. ಅದು ಸಮುದಾಯದ ಆಸ್ತಿ. ಸಾರ್ವಜನಿಕ ಸಹಭಾಗಿತ್ವದೊಂದಿಗೆ ನದಿಗಳ ಸ್ವಚ್ಛತೆಯ ಹಾಗೂ ನಿರಂತರ ಹರಿವಿನ ಬಗ್ಗೆ ಚಿಂತಿಸಬೇಕು. ನೀರು ಬತ್ತುವಿಕೆಗೆ ಸ್ವಾತಿ ಮಳೆ ಬಾರದಿರುವುದು ಒಂದು ಕಾರಣವಾದರೆ ನಾವು ಮಾಡುತ್ತಿರುವ ಅನೇಕ ತಪ್ಪುಗಳೂ ಕಾರಣವಾಗುತ್ತವೆ. ಮಹಾರಾಷ್ಟ್ರ ಹಾಗೂ ರಾಜಸ್ಥಾನಗಳಲ್ಲಿ ನೀರಿನ ಕೊರತೆ ಕಂಡಾಗ ಜನರೆಲ್ಲ ಒಗ್ಗೂಡಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡ ಉದಾಹರಣೆಗಳಿವೆ. ನೀರು ಸಿಕ್ಕಿದರೆ ಎಲ್ಲವೂ ಸಿಕ್ಕಿದಂತೆ. ನೀರು ಬತ್ತಿದರೆ ಎಲ್ಲವೂ ಬತ್ತಿದಂತೆ ಎಂಬ ಮಾತಿದೆ.
ಪಯಸ್ವಿನಿಯಲ್ಲಿ ನೀರು ಸಂಪೂರ್ಣ ಮರೆಯಾಗುವ ಮೊದಲೇ ಜನಸಮುದಾಯವು ಅರ್ಥಮಾಡಿಕೊಂಡು ಮಳೆ ನೀರನ್ನು ಇಂಗಿಸಿಕೊಂಡು ಅಂತರ್ಜಲ ತುಂಬುವಂತೆ ಮಾಡಬೇಕು ಎಂದು ಖ್ಯಾತ ಜಲತಜ್ಞ ಶ್ರೀಪಡ್ರೆ ಹೇಳಿದರು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ “ಜೀವ ಜಲದ ಉಳಿವು: ಪಯಸ್ವಿನಿಯಲ್ಲಿ ನಿರಂತರ ನೀರಿನ ಹರಿವು” ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ವಿಷಯ ಮಂಡನೆ ಮಾಡಿದರು. ಈ ಕಾರ್ಯಕ್ರಮವನ್ನು ಶ್ರೀ ಸರಸ್ವತಿ ಚ್ಯಾರಿಟೆಬಲ್ ಟ್ರಸ್ಟ್ ಪುತ್ತೂರು ಇವರು ಪ್ರಾಯೋಜಿಸಿದ್ದರು.
ಸುಳ್ಯದ ಶಾಸಕ ಎಸ್. ಅಂಗಾರ ಮಾತನಾಡಿ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ಕಟ್ಟುವ ಯೋಜನೆ ಸರಕಾರದ ಮುಂದಿದೆ. ಪಯಸ್ವಿನಿ ನದಿಯ ಜಲಮೂಲದ ಸಮೃದ್ಧಿಯ ಕೆಲಸದಲ್ಲಿ ತನ್ನ ಸಹಕಾರ ನೀಡುವುದಾಗಿ ಹೇಳಿದರು. ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ಹಾಗೂ ಡಾ. ವಿದ್ಯಾಶಾಂಭವ ಪಾರೆ ಅಭಿಪ್ರಾಯ ಮಂಡಿಸಿದರು.
ಆಶಿಕಾ ಪ್ರಾರ್ಥಿಸಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಎಲ್ಲರನ್ನೂ ಸ್ವಾಗತಿಸಿ ಪಯಸ್ವಿನಿಯ ಮೂಲ ಒರತೆಗಳನ್ನು ಬಲಪಡಿಸುವ ಅಗತ್ಯವನ್ನು ಮನಗಾಣಿಸಿದರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಿಪ್ರಸಾದ್ ಕೆ. ಇಂತಹ ಜಾಗೃತಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಜನರು ತುರ್ತಾಗಿ ಅರ್ಥಮಾಡಿಕೊಳ್ಳಬೇಕು ಎಂದರು.
ಚರ್ಚೆಯಲ್ಲಿ ಪಯಸ್ವಿನಿ ಉತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಭಟ್, ರಾಘವೇಂದ್ರ ಮಠದ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ, ಕೃಷ್ಣವೇಣಿ ಮುಂತಾದವರು ಭಾಗವಹಿಸಿದರು.
ಕೊನೆಯಲ್ಲಿ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಪಿನ್ ಚಂದ್ರ ವಂದಿಸಿರು.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…