ಸುಳ್ಯ:ಪ್ರತಿಯೊಬ್ಬರೂ ಅಪರಾಧಗಳಿಂದ ದೂರವಿದ್ದು ದುಶ್ಚಟಗಳಿಂದ ಮುಕ್ತರಾದರೆ ಅಂತಹ ನಾಡು ಆದರ್ಶವಾಗಿರಲು ಸಾಧ್ಯ. ಆದುದರಿಂದ ಆದರ್ಶ ಗ್ರಾಮವಾಗಲು ಪ್ರತಿಯೊಬ್ಬರೂ ಕೈ ಜೋಡಿಸುವ ಅಗತ್ಯವಿದೆ ಎಂದು ಶಾಸಕ ಎಸ್. ಅಂಗಾರ ಹೇಳಿದ್ದಾರೆ.
ಮಂಡೆಕೋಲು ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿ ಮತ್ತು ಅಪರಾಧ ಮುಕ್ತ ಗ್ರಾಮ ಜನಾಂದೋಲನ ಸಮಿತಿಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ವ-ಸಹಾಯ ಸಂಘಗಳ ಒಕ್ಕೂಟ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಹಯೋಗದಲ್ಲಿ ಮಂಡೆಕೋಲನ್ನು ಆದರ್ಶ ಗ್ರಾಮವಾಗಿಸುವ ಸಂಕಲ್ಪ ‘ಗ್ರಾಮ ಸ್ವರಾಜ್ಯದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಅಪರಾಧ ಮುಕ್ತ ಗ್ರಾಮ ಎಂಬ ಆಂದೋಲನ ನಡೆಸಿರುವುದು ಮತ್ತು ಈಗ ಗ್ರಾಮಸ್ಥರೇ ಸೇರಿ ಆದರ್ಶ ಗ್ರಾಮವನ್ನು ರೂಪಿಸಲು ಮುಂದಾಗಿರುವುದು ಅತ್ಯಂತ ಧನಾತ್ಮಕ ಮತ್ತು ಶ್ರೇಷ್ಠ ಚಿಂತನೆ. ಇದಕ್ಕೆ ಎಲ್ಲಾ ರೀತಿಯ ಬೆಂಬಲವನ್ನೂ ನೀಡುತ್ತೇನೆ. ಗ್ರಾಮದ ಮೂಲಭೂತ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ ಮುಖ್ಯ ಅತಿಥಿಯಾಗಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಬಿ. ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಾನಕಿ ಕಣೆಮರಡ್ಕ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಪ್ರೇರಕಿ ಸಂಧ್ಯಾ ಮಾವಂಜಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸರೋಜಿನಿ ಮಾವಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯೆ ವಿನುತಾ ಪಾತಿಕಲ್ಲು ಸ್ವಾಗತಿಸಿ, ಅಪರಾಧ ಮುಕ್ತ ಗ್ರಾಮ ಜನಾಂದೋಲನ ಸಮಿತಿ ಸಂಚಾಲಕ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ವಿಕಾಸ ಸಮಿತಿ ಸಂಚಾಲಕ ಜಯರಾಜ್ ಕುಕ್ಕೆಟ್ಟಿ ವಂದಿಸಿದರು. ಶ್ರೀಕಾಂತ್ ಮವಂಜಿ ಮತ್ತು ಬಾಲಕೃಷ್ಣ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …
ಬೇಸಿಗೆಯಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…