ಸುಳ್ಯ: ಭಾರತೀಯ ಜೀವ ವಿಮಾ ನಿಗಮದ ಸುಳ್ಯ ಉಪಗ್ರಹ ಶಾಖೆಯಲ್ಲಿ ನಿಗಮದ ಸಂಸ್ಥಾಪನಾ ದಿನಾಚರಣೆ ಮಂಗಳವಾರ ನಡೆಯಿತು.
ಮೊದಲ ಗ್ರಾಹಕ ರಾಜೇಂದ್ರಪ್ರಸಾದ್ ಮೂಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಿ, ನಿಗಮವು ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸಿ ಬಾಳಿಗೆ ಬೆಳಕು ನೀಡುತ್ತಿದೆ. ಇಲ್ಲಿ ತೊಡಗಿಸಿದ ಪ್ರತಿಯೊಬ್ಬರ ಹಣವೂ ಭದ್ರವಾಗಿದ್ದು ಸಮಾಜದ ಒಳಿತಿಗಾಗಿ ಬಳಕೆಯಾಗುವುದು ಶ್ಲಾಘನೀಯವೆಂದರು.
ಶಾಖಾಧಿಕಾರಿ ಜಿ. ಶಶಿಧರ ಹೆಗ್ಡೆ ಅವರು ನಿಗಮದ ಬಗ್ಗೆ ಮಾಹಿತಿ ನೀಡಿ 63 ಸಂವತ್ಸರಗಳನ್ನು ಪೂರೈಸಿ ಸಂಸ್ಥೆ ಮುನ್ನಡೆಯುತ್ತಿದ್ದು, ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿ ದೇಶದ ನವರತ್ನ ಸಂಸ್ಥೆಗಳಲ್ಲಿಯೇ ಮಹಾರತ್ನ ಸಂಸ್ಥೆಯಾಗಿ ದೇಶದ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡುತ್ತಿದೆ. 13ನೇ ಪಂಚವಾರ್ಷಿಕ ಯೋಜನೆಯಲ್ಲಿ ಈಗಾಗಲೇ 7,01,483 ಕೋಟಿ ರೂಪಾಯಿಗಳನ್ನು ಗಮನಾರ್ಹ ಹೂಡಿಕೆ ಮಾಡಿದೆ. ಗ್ರಾಹಕರ ಬೇಡಿಕೆಗನುಸಾರ ವಿವಿಧ ರೀತಿಯ ಸೌಲಭ್ಯಗಳನ್ನೊಳಗೊಂಡ ವಿವಿಧ ವಿಮಾ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ ಎಂದರು.
ಅಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ ಮತ್ತು ಪ್ರತಿನಿಧಿ ಪ್ರಭಾಕರ ಎಸ್.ಎನ್. ಮಾತನಾಡಿದರು. ಉಪ ಆಡಳಿತಾಧಿಕಾರಿ ಲಿಂಗಪ್ಪ ಗೌಡ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಉಮೇಶ್ ನಾಯಕ್ ವಂದಿಸಿದರು. ಪ್ರತಿನಿಧಿ ಬಿ.ಪದ್ಮನಾಭ ಶೆಟ್ಟಿ ನಿರೂಪಿಸಿದರು.
ಆಡಳಿತಾಧಿಕಾರಿ ಮಹಾಲಿಂಗ ನಾಯ್ಕ ,ಪ್ರತಿನಿಧಿಗಳಾದ ಮಾಧವ ಕೆ. ಜಾಲ್ಸೂರು ಮತ್ತು ಸೋಮನಾಥ ಕೇರ್ಪಳ, ಕಚೇರಿ ಸಹಾಯಕರಾದ ಸಂದೀಪ್ ಮತ್ತು ರಾಜೇಶ್ ಉಪಸ್ಥಿತರಿದ್ದರು.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…