Advertisement
ಸುದ್ದಿಗಳು

ಎಸ್‌ಎಸ್‌ಎಫ್ ಸುಳ್ಯ ಡಿವಿಷನ್ ವತಿಯಿಂದ “ಮರ್ ಹಬಾ ಯಾ ರಬೀಅ್” ಮೀಲಾದ್ ಕಾಲ್ನಡಿಗೆ ಜಾಥಾ

Share

ಸುಳ್ಯ: ಲೋಕನೇತಾರರಾದ ಹಝ್ರತ್ ಮುಹಮ್ಮದ್ ಪೈಗಂಬರ್(ಸ) ರವರ ಜನ್ಮದಿನಾಚರಣೆ, ಎ.ಪಿ.ಉಸ್ತಾದರ ಕರ್ನಾಟಕ ಯಾತ್ರೆಯ ಐದನೇ ವರ್ಷದ ಸವಿನೆನಪು ಹಾಗೂ ನ. 7ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಎಸ್‌.ಎಸ್‌.ಎಫ್ ಸುಳ್ಯ ಡಿವಿಷನ್ ವತಿಯಿಂದ ಮೊಗರ್ಪಣೆಯಿಂದ ಗಾಂಧಿನಗರದವರೆಗೆ ಮರ್ ಹಬಾ ಯಾ ರಬೀಅ್ ಬೃಹತ್ ಮೀಲಾದ್ ಜಾಥಾ ಕಾರ್ಯಕ್ರಮವು ನಡೆಯಿತು.

ಸುನ್ನೀ ಜಂಇಯ್ಯತ್ತುಲ್ ಉಲಮಾ ತಾಲೂಕು ಸಮಿತಿ ಅಧ್ಯಕ್ಷರಾದ ಅಸಯ್ಯದ್ ಕುಂಞಿಕೋಯ ಸಅದಿ ತಂಞಳ್ ಹಾಗೂ ಮೊಗರ್ಪಣೆ ಮಸೀದಿಯ ಖತೀಬರಾದ ಅಹಮ್ಮದ್ ಸಖಾಫಿರವರು ಮಾಂಬಿಳಿ ಮಖಾಂ ಝಿಯಾರತ್ತಿಗೆ ನೇತೃತ್ವ ನೀಡಿ ಧ್ವಜವನ್ನು ಹಸ್ತಾಂತರಿಸಿ ಜಾಥಾಗೆ ಚಾಲನೆ ನೀಡಿದರು.

ಈ ಸಮಾರಂಭದಲ್ಲಿ ಸುನ್ನೀ ಸಂಘಟನೆಗಳ ನಾಯಕರುಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಹಸನ್ ಸಖಾಫಿ ಬೆಳ್ಳಾರೆ, ಯೂಸುಫ್ ಹಾಜಿ ಬಿಳಿಯಾರು, ಎ.ಬಿ.ಅಶ್ರಫ್ ಸಅದಿ, ಅಂದುಂಞಿ ಗೋರಡ್ಕ, ಝೈನುಲ್ ಅಬಿದೀನ್ ತಂಙಳ್ ಜಯನಗರ, ಲತೀಫ್ ಸಖಾಫಿ ಮಾಡನ್ನೂರು, ಲತೀಫ್ ಸಖಾಫಿ ಗೂನಡ್ಕ, ಮಹಮ್ಮದ್ ಆಲಿ ಸಖಾಫಿ ಗೂನಡ್ಕ, ಸಿದ್ದೀಕ್ ಕಟ್ಟೆಕ್ಕಾರ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಶಮೀರ್ ಮೊಗರ್ಪಣೆ, ಮೂಸಾ ಪೈಂಬಚ್ಚಾಲ್, ಸಿದ್ದೀಕ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.

ಕೊನೆಯಲ್ಲಿ ಗಾಂಧಿನಗರ ಪೆಟ್ರೋಲ್ ಪಂಪ್‌ನ ಮುಂಭಾಗ ಹುಬ್ಬುರ್ರಸೂಲ್ ಸಂದೇಶ ಭಾಷಣವು ನಡೆಯಿತು. ಎಸ್‌ಎಸ್‌ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ ಮುಖ್ಯ ಪ್ರಭಾಷಣ ನಡೆಸಿದರು. ಸುಳ್ಯ ಡಿವಿಷನ್ ಎಸ್‌.ಎಸ್‌.ಎಫ್‌ ಸಮಿತಿ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆ ವಹಿಸಿದರು. ನ.ಪಂ. ಸದಸ್ಯರುಗಳಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಾಜ್ಯ ಎಸ್.ಎಸ್.ಎಫ್ ಕೋಶಾಧಿಕಾರಿ ರವೂಫ್ ಖಾನ್ ಮೂಡುಗೋಪಾಡಿ ಮೊದಲಾದವರು ಉಪಸ್ಥಿತರಿದ್ದರು. ಡಿವಿಷನ್ ಉಪಾಧ್ಯಕ್ಷ ಫೈಝಲ್ ಝುಹರಿ ಸ್ವಾಗತಿಸಿ, ಡಿವಿಷನ್ ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ವಂದಿಸಿದರು. ಜಾಥಾದಲ್ಲಿ ಎಸ್‌.ಬಿ.ಎಸ್ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನವು ನಡೆಯಿತು. ಸುಮಾರು 500ಕ್ಕೂ ಹೆಚ್ಚು ಎಸ್‌ಎಸ್‌ಎಫ್ ಮತ್ತು ಸಹಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

3 hours ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

9 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

9 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

10 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

20 hours ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

1 day ago