ಎಸ್‍ಎಸ್‍ಎಲ್‍ಸಿ ಫಲಿತಾಂಶ : ತಾಲೂಕಿನ 6 ಶಾಲೆಗಳಿಗೆ ಶೇ.100 ಸಾಧನೆ

May 1, 2019
5:25 AM

ಸುಳ್ಯ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು  ಸುಳ್ಯ ತಾಲೂಕಿಗೆ ಶೇ.80.3 ಫಲಿತಾಂಶ ದಾಖಲಾಗಿದೆ. ಸುಳ್ಯ ತಾಲೂಕಿನ ಆರು ಶಾಲೆಗಳಿಗೆ ಶೆ.100 ಫಲಿತಾಂಶ ಬಂದಿದೆ.

Advertisement
Advertisement

ಪಂಜದ ಮೊರಾರ್ಜಿ ದೇಸಾಯಿ ಶಾಲೆ, ಸುಳ್ಯದ ಸ್ನೇಹ ಪ್ರೌಢ ಶಾಲೆ, ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಜ್ಞಾನ ದೀಪ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ ಮತ್ತು ಗುತ್ತಿಗಾರಿನ ಬ್ಲೆಸ್ಡ್ ಕುರಿಯಾಕೋಸ್ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.

ಸ್ನೇಹ ಪ್ರೌಢ ಶಾಲೆ ಸುಳ್ಯ:
ಪರೀಕ್ಷೆಗೆ ಹಾಜರಾದ 12 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ. ಎಂಟು ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ನಾಲ್ಕು ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸೇವಿತ ಪಿ.ಸಿ(595), ಶ್ರೀಶ ನಾರಾಯಣ.ಎ(573), ಅನ್ವಿತಾ.ಎನ್.ಎನ್.(573) ಅತೀ ಹೆಚ್ಚು ಅಂಕ ಪಡೆದಿದ್ದಾರೆ.

ಸೇವಿತ ಪಿ ಸಿ (595)

 

ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸುಳ್ಯ:
ಪರೀಕ್ಷೆಗೆ ಹಾಜರಾದ ಎಲ್ಲಾ 59 ಮಂದಿ ಉತ್ತೀರ್ಣರಾಗಿದ್ದಾರೆ. 26 ಅತ್ಯುನ್ನತ ಶ್ರೇಣಿ, 32 ಪ್ರಥಮ ಶ್ರೇಣಿ, ಒಂದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರುತಿ ಎಂ.ಆರ್.(610), ವಿಷ್ಣುಪ್ರಕಾಶ್ ಟಿ.ಜಿ(608) ದೀಕ್ಷಾ ಸಿ.ಜೆ(607) ಅತೀ ಹೆಚ್ಚು ಅಂಕ ಪಡೆದಿದ್ದಾರೆ.

ಜ್ಞಾನದೀಪ ಶಾಲೆ ಎಲಿಮಲೆ:
ಪರೀಕ್ಷೆಗೆ ಹಾಜರಾದ 25 ಮಂದಿಯಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಆರು ಅತ್ಯುನ್ನತ   ಶ್ರೇಣಿ, 15 ಪ್ರಥಮ ಶ್ರೇಣಿಯಲ್ಲಿ ಮತ್ತು ನಾಲ್ಕು ದ್ವೀತೀಯ ಶ್ರೇಣಿ. ತೇಜಸ್ ಎಂ.ವಿ(590), ಶಶಾಂಕ್ ಬಿ.ಎಸ್.(573), ಸ್ಮಿತಾ ಕಾಯರ(572) ಅತೀ ಹೆಚ್ಚು ಅಂಕ ಪಡೆದಿದ್ದಾರೆ.

ತೇಜಸ್ ಎಂ ವಿ

ಸೈಂಟ್ ಜೋಸೆಫ್ ಶಾಲೆ ಸುಳ್ಯ-ಶೇ.98.3:
ಪರೀಕ್ಷೆಗೆ ಹಾಜರಾದ 122 ಮಂದಿಯಲ್ಲಿ 120 ಮಂದಿ ಉತ್ತೀರ್ಣರಾಗಿ ಶೇ.98.3 ಫಲಿತಾಂಶ ದಾಖಲಿಸಿದೆ. ನಿಕೋಲ್ ಲಸ್ರಾದೋ(612), ಅನೂಷ(608), ಅನನ್ಯ(607), ಪಾತಿಮಾತ್ ನಿಷ್ಮಾ(604), ಆದಿತ್ಯ ಅತ್ರೇಯ ಜಿ.ಆರ್(601) ಅತೀ ಹೆಚ್ಚು ಅಂಕ ಪಡೆದಿದ್ದಾರೆ.

ಆದಿತ್ಯ

ಎಲಿಮಲೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 54ರಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.81.41, ಅರಂತೋಡು ನೆಹರೂ ಸ್ಮಾರಕ ಪ.ಪೂ.ಕಾಲೇಜಿನಲ್ಲಿ 99ರಲ್ಲಿ 88 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶಶೇ.89 ಫಲಿತಾಂಶ ಬಂದಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror