ನಿಂತಿಕಲ್ಲಉ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಎಣ್ಮೂರು ಶಾಖೆ ಇದರ ಅರ್ಧ ವಾರ್ಷಿಕ ಮಹಾ ಸಭೆ ಮತ್ತು ಮಾಸಿಕ ಜಲಾಲಿಯ್ಯ ರಾತೀಬ್ ಪಡ್ಪಿನಂಗಡಿಯಲ್ಲಿ ನಡೆಯಿತು.
ಶಾಖಾದ್ಯಕ್ಷರಾದ ಅಬ್ದುಲ್ ರಝಾಕ್ ಕೊಳ್ತಂಗರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮುಸ್ತಫ ಸಅದಿ ಎಣ್ಮೂರು ಉದ್ಘಾಟಿಸಿದರು. ಸಭಾ ವೀಕ್ಷಕರಾದ ಜಬ್ಬಾರ್ ಹನೀಫಿ ನಿಂತಿಕಲ್ಲುರವರ ಮೇಲ್ನೋಟದಲ್ಲಿ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಯಲ್ಲಿ ಬದಲಾವಣೆ ತರಲಾಯಿತು. ಅದ್ಯಕ್ಷರಾಗಿ ಅಬ್ದುಲ್ ರಝಾಕ್ ಕೊಳ್ತಂಗೆರೆ, ಉಪಾಧ್ಯಕ್ಷರಾಗಿ ಮಶೂದ್ ಅಹ್ಸನಿ ಎಣ್ಮೂರು ಹಾಗೂ ಶಾಹಿದ್ ಕೆ ಬಿ, ಪ್ರಧಾನ ಕಾರ್ಯದರ್ಶಿಯಾಗಿ ರಹ್ಮಾನ್ ಟಿ.ಎಸ್ ಎಣ್ಮೂರು, ಜೊತೆ ಕಾರ್ಯದರ್ಶಿಗಳಾಗಿ ತ್ವಾಹಾ ಕೆ.ಬಿ ಹಾಗೂ ಖಲೀಲ್ ಮಿರ್ಷಾದ್, ಕೋಶಾಧಿಕಾರಿಯಾಗಿ ನೂರುದ್ದೀನ್ ಅಂಜದಿ ಮತ್ತು 7 ಕಾರ್ಯಕಾರಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಕಾರ್ಯದರ್ಶಿ ನೂರುದ್ದೀನ್ ಅಂಜದಿ ಸ್ವಾಗತಿಸಿ ನೂತನ ಕಾರ್ಯದರ್ಶಿ ರಹ್ಮಾನ್ ಟಿ ಎಸ್ ಎಣ್ಮೂರು ವಂದಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel