ನಿಂತಿಕಲ್ಲು: ಎಸ್ ಎಸ್ ಎಫ್ ನಿಂತಿಕಲ್ಲು ಸೆಕ್ಟರ್ ವತಿಯಿಂದ ನಡೆದ ನವ ಬದುಕಿಗೊಂದು ದಿಕ್ಸೂಚಿ “ಉಲಾಝ್ – 2019” ಕಾರ್ಯಕ್ರಮವು ಸೆಪ್ಟೆಂಬರ್ 30 ಸೋಮವಾರ ಮಗ್ರಿಬ್ ನಮಾಜಿನ ಬಳಿಕ ನಿಂತಿಕಲ್ಲು ಎಸ್ ಎಸ್ ಎಫ್ ಕಚೇರಿಯಲ್ಲಿ ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಹನೀಫಿ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹುರಿ ನೆಕ್ಕಿಲ ಉದ್ಘಾಟಿಸಿದರು. ನಂತರ ನಡೆದ ಉಸ್ತಾದ್ ಝಿಯಾದ್ ಸಖಾಫಿ ಬಾರೆಬೆಟ್ಟು ಅವರ ಸುನ್ನತ್ ಹಾಗೂ ದಾಈ ಎಂಬ ವಿಷಯದ ಕುರಿತ ತರಗತಿಯೂ ಕಾರ್ಯಕರ್ತರಿಗೆ ಹೊಸ ಹುರುಪನ್ನು ನೀಡಿತು. ನಂತರ ನೆರೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಣೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡ ಸೆಕ್ಟರ್ ವ್ಯಾಪ್ತಿಯ ಕಾರ್ಯಕರ್ತರಾದ ಅಬೂಬಕ್ಕರ್ ನೆಕ್ಕಿಲ, ರಝಾಕ್ ಕೆ.ಎಚ್ ನೆಕ್ಕಿಲ, ಅಬೂತಾಹಿರ್ ನೆಕ್ಕಿಲ, ಸಂಶುದ್ದೀನ್ ನೆಕ್ಕಿಲ, ಮುಸ್ತಫಾ ಸಮಹಾದಿ, ರಿಯಾಝ್ ನೆಕ್ಕಿಲ, ಸ್ವಾದಿಕ್ ನೆಕ್ಕಿಲ ಅವರನ್ನು ಸೆಕ್ಟರ್ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ನಿಂತಿಕಲ್ಲು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ರಹ್ಮಾನ್ ಟಿ ಎಸ್ ಎಣ್ಮೂರು ಸ್ವಾಗತಿಸಿದರು. ಸೆಕ್ಟರ್ ಪ್ರ. ಕಾರ್ಯದರ್ಶಿ ರಿಯಾಝ್ ನೆಕ್ಕಿಲ ಅವರು ವಂದಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ನಿಂತಿಕಲ್ಲು ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಪೊಲಾಜೆ, ಎಸ್ ವೈ ಎಸ್ ಕಾರ್ಯಕರ್ತರಾದ ಅಝೀಝ್ ಮುಸ್ಲಿಯಾರ್ ಕಲ್ಲೇರಿ ಮತ್ತು ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.