ಸುಳ್ಯ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನೂತನ ಅಧ್ಯಕ್ಷ ಅಬ್ದುಲ್ ಕಲಾಂ ಅಧ್ಯಕ್ಷತೆಯಲ್ಲಿ ಬೆಳ್ಳಾರೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಮಜೀದ್ ಖಾನ್ ಪ್ರಸ್ತುತ ದೇಶದ ವ್ಯವಸ್ಥೆಗಳ ಮೇಲೆ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿಸುತ್ತಾ, ಅನ್ಯಾಯ ಅಕ್ರಮ ಮೇಳೈಸುತ್ತಿರುವ ಈ ಸಂದರ್ಭದಲ್ಲಿ, ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊರಲು ಎಸ್.ಡಿ.ಪಿ ಐ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶಾಫಿ ಬಿ.ಎಂ. ಅರವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ನೂತನ ಅಧ್ಯಕ್ಷ ಅಬ್ದುಲ್ ಕಲಾಂ ಅವರನ್ನು ಸನ್ಮಾನಿಲಾಯಿತು. ಬಳಿಕ ಮಾತನಾಡಿದ ಅಬ್ಲುಲ್ ಕಲಾಂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರ ಸಹಕಾರ ಕೋರಿ ದೇಶದ ಪ್ರಸ್ತುತ ಸನ್ನಿವೇಶವನ್ನು ನ್ಯಾಯ ನಿರಾಕರಣೆಯ ಸಂದರ್ಭದಲ್ಲಿ ನ್ಯಾಯ ಸಿಗುವವರೆಗೆ ಬೀದಿಗಿಳಿದು ಹೋರಾಟ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ವಿಧಾನ ಸಭಾ ಕಾರ್ಯದರ್ಶಿ ಮುಸ್ತಫಾ ಎಂ.ಕೆ. ಸ್ವಾಗತಿಸಿದರು.
ವೇದಿಕೆಯಲ್ಲಿ ಹಾಜಿ ಮಮ್ಮಲಿ ಹಾಗು ವಿಧಾನ ಸಭಾ ಸಮಿತಿ ಸದಸ್ಯರು ಹಾಜರಿದ್ದರು. ಸವಣೂರು ವಲಯ ಅಧ್ಯಕ್ಷ ರಝಾಕ್ ಆಂಕತಡ್ಕ ಧನ್ಯವಾದ ಮಾಡಿದರು. ಬೆಳ್ಳಾರೆ ವಲಯ ಅಧ್ಯಕ್ಷ ಫೈಝಲ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.