ನಿಂತಿಕಲ್ಲು : ಎಸ್ ಎಸ್ ಎಫ್ ನೆಕ್ಕಿಲ ಶಾಖೆ ಇದರ ಆಶ್ರಯದಲ್ಲಿ ಎಸ್ ಎಸ್ ಎಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಸಹಭಾಗಿತ್ವದಲ್ಲಿ 88ನೇಯ ರಕ್ತದಾನ ಶಿಬಿರವು ಯೇನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಸಹಯೋಗದೊಂದಿಗೆ ಖುವ್ವತುಲ್ ಇಸ್ಲಾಂ ಮದ್ರಸ ನೆಕ್ಕಿಲ ಸಂಭಾಗಣದಲ್ಲಿ ನಡೆಯಿತು
ಕಾರ್ಯಕ್ರಮದಲ್ಲಿ ಶಾಖಾ ಅಧ್ಯಕ್ಷರು ಅಝೀಝ್ ಪಿ ಎ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಗೈದರು. ಬದ್ರಿಯಾ ಜುಮ್ಮಾ ಮಸೀದಿ ನೆಕ್ಕಿಲ ಇದರ ಮುದರ್ರಿಸರು ಝಿಯಾದ್ ಸಖಾಫಿ ಬಾರಬೆಟ್ಟು ದುಆ ನೆರವೆರಿಸಿದರು. ಕಾರ್ಯಕ್ರಮವನ್ನು ದೇವಿಪ್ರಸಾದ್ ಜಾಕೆ ಸ್ಥಾಪಕಾಧ್ಯಕ್ಷ ರು ಜೆ ಸಿ ಐ ಪಂಜ ಉದ್ಘಾಟಿಸಿ ರಕ್ತದಾನದ ಮಹತ್ವ ಕುರಿತು ತಿಳಿಸುತ್ತಾ ರಕ್ತದಾನದಿಂದ ಪಡೆದುಕೊಳ್ಳುವುದೇ ಹೆಚ್ಚು ಕಳೆದುಕೊಳ್ಳುವುದು ಕಮ್ಮಿ ಎಂದು ಹಿತವಚನ ಗೈದರು, ಬಿ.ಜೆ.ಎಂ ಅಧ್ಯಕ್ಷರು ಉಮರ್ ಸೀಗೆಯಡಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಎಸ್ ಎಸ್ ಎಫ್ ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷರು ಜಬ್ಬಾರ್ ಹನೀಫಿ ,ವಾಚಣ್ಣ ಕೆರೆಮೂಲೆ, ಮಹೇಶ್ ಕೋಟೆ, ಕಾರ್ಯಕ್ರಮ ಆಶಂಸ ನೀಡಿದರು. ಎಸ್ .ಎಸ್.ಎಫ್ . ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಮಹಮ್ಮದ್ ಕರೀಂ ಬೋಳಂತೂರು ಅವರಿಗೆ ಮತ್ತು ಯೇನೆಪೋಯ ಮೆಡಿಕಲ್ ಕಾಲೇಜಿಗೆ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಬ್ಲಡ್ ಸೈಬೋ ಸುಳ್ಯ ಡಿವಿಷನ್ ಉಸ್ತುವಾರಿಗಳಾದ ಸಿದ್ದೀಕ್ ಗೂನಡ್ಕ , ರಿಯಾಝ್ ಪಿ ವೈ ನೆಕ್ಕಿಲ , ಅಬೂಬಕ್ಕರ್ ಪಾಂಡಿಗದ್ದೆ,ಎಸ್ ಎಸ್ ಎಫ್ ನೆಕ್ಕಿಲ ಶಾಖಾ ಕಾರ್ಯದರ್ಶಿ ರಝಾಕ್ ಕೆ ಹೆಚ್,ಎಸ್.ಎಂ.ಎ ಬೈತಡ್ಕ ರೀಜನಲ್ ಅಧ್ಯಕ್ಷರು ಅಬ್ದುರ್ರಹ್ಮಾನ್ ನೆಲ್ಲಿಕಟ್ಟೆ , ಉಪಸ್ಥಿತರಿದ್ದರು.
ಸುಮಾರು ಹತ್ತು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೂ ರಕ್ತದಾನ ಶಿಬಿರವು ಮುಂದುವರೆದಿದ್ದೂ ,60 ಕ್ಕಿಂತಲೂ ಹೆಚ್ಚು ಜನರು ಪಾಲ್ಗೊಂಡು ರಕ್ತದಾನ ಮಾಡಿದರು.
ಸುಳ್ಯ ಎಸ್ಸೆಸ್ಸೆಫ್ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹ್ರಿ ಸ್ವಾಗತಿಸಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕೋಶಾಧಿಕಾರಿ ಹಸೈನಾರ್ ನೆಲ್ಲಿಕಟ್ಟೆ ವಂದಿಸಿದರು.