ಸುಬ್ರಹ್ಮಣ್ಯ: ಕುಲ್ಕುಂದದ ಇತಿಹಾಸ ಪ್ರಸಿದ್ಧ ಬಸವನಮೂಲೆಯ ಶ್ರೀ ಬಸವೇಶ್ವರ ದೇವಳದಲ್ಲಿ ಜಾತ್ರೋತ್ಸವವವು ಎ.20 ಶನಿವಾರದಂದು ನೆರವೇರಲಿದೆ. ಇತ್ತೀಚೆಗೆ ಬ್ರಹ್ಮಕಲಶೋತ್ಸವ ನೆರವೇರಿದ ಇತಿಹಾಸ ಪ್ರಸಿದ್ಧ ಬಸವನಮೂಲೆಯ ಶ್ರೀ ಬಸವೇಶ್ವರ ದೇವಳದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ವೇದಮೂರ್ತಿ ಶಿವರಾಮ ಭಟ್ ಕಿಳಿಂಗಾರು ಇವರ ನೇತೃತ್ವದಲ್ಲಿ ನಡೆಯಲಿದೆ ಎಂದು ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ ಹೇಳಿದ್ದಾರೆ.
ಈ ನಿಮಿತ್ತ ಬೆಳಗ್ಗೆ ಗಣಪತಿ ಹೋಮ ನಡೆಯಲಿದೆ.ಬಳಿಕ ಶತ ರುದ್ರಾಭಿಷೇಕ, ಕಲಶಾಭಿಷೇಕ,ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತಪರ್ಣಣೆ ನಡೆಯಲಿದೆ.ಸಂಜೆ ದೀಪಾರಾಧನೆ, ತಾಯಾಂಬಿಕಾ,ರಂಗಪೂಜೆ, ಶ್ರೀಭೂತ ಬಲಿ ನೆರವೇರಲಿದೆ.ಬಳಿಕ ಪಲ್ಲಕಿ ಉತ್ಸವ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ,ಮಂತ್ರಾಕ್ಷತೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement