ಸುಳ್ಯ: ಯುವಬ್ರಿಗೇಡ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾದು ಹೋಗುವ ಕುಮಾರಧಾರಾ ನದಿಯನ್ನು ಸ್ವಚ್ಛತಾ ಕಾರ್ಯವನ್ನು #ಕುಮಾರ_ಸಂಸ್ಕಾರ ಎಂಬ ಹೆಸರಿಲ್ಲಿ ಎ.27 ಹಾಗೂ 28 ರಂದು ನಡೆಯಲಿದೆ ಎಂದು ಯುವಬ್ರಿಗೇಡ್ ಪ್ರಕಟಣೆ ತಿಳಿಸಿದೆ.
ಯುವಬ್ರಿಗೇಡ್ ಪರಿಸರ ಸಂರಕ್ಷಣೆಯ ಅನೇಕ ಕಾರ್ಯಕ್ರಮಗಳನ್ನು ಈ ಹಿಂದೆ ಮಾಡಿದೆ. ಕಳೆದ ವರ್ಷ ಕಾವೇರಿ ನದಿಯನ್ನು ಮೊದಲ್ಗೊಂಡು ರಾಜ್ಯಾದ್ಯಂತ 7 ದಿನಗಳ ಕಾಲ ನದಿ ಸ್ವಚ್ಛತಾ ಕಾರ್ಯ ನಡೆಸಿತ್ತು. ನಮ್ಮೆಲ್ಲರ ಪಾಪ ಕಳೆಯುವ ನದಿ ಇಂದು ಮಲಿನವಾಗಿದೆ. ನದಿಗಳಲ್ಲಿ ಟನ್‍ಗಟ್ಟಲೆ ತ್ಯಾಜ್ಯಗಳು ಸಿಗುತ್ತಿವೆ.
ಈ ಬಾರಿ ಕುಮಾರಧಾರಾ ನದಿ ಸ್ವಚ್ಛತಾ ಕಾರ್ಯವನ್ನು ಯುವಬ್ರಿಗೇಡ್ ಮಾಡಲಿದೆ.ಸರ್ಪ ದೋಷ ನಿವಾರಣೆಗೆ ಸರ್ಪಸಂಸ್ಕಾರ ಮಾಡುವಂತೆ ನದಿ ಹಾಳು ಮಾಡಿರುವುದಕ್ಕೆ ಕುಮಾರ ಸಂಸ್ಕಾರ ಎಂಬ ಹೆಸರಿನಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಯುವಬ್ರಿಗೇಡ್ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು, ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಯುವಬ್ರಿಗೇಡ್ ಮಾರ್ಗದರ್ಶನ ಚಕ್ರವರ್ತಿ ಸೂಲಿಬೆಲೆ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490