ಸುಬ್ರಹ್ಮಣ್ಯ : ಏನೆಕಲ್ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಬಚ್ಚನಾಯಕ ದೇವಳದ ಮುಂಭಾಗದ ನದಿಯಲ್ಲಿನ ದೇವರ ಗುಂಡಿಗೆ ಮೀನು ಹಿಡಿಯಲು ಬಂದಿದ್ದ ಐವರು ವ್ಯಕ್ತಿಗಳು ಪೊಲೀಸ್ ಬಲೆಗೆ ಬಿದ್ದ ಘಟನೆ ನಡೆದಿದೆ .
ಬಂಧಿತ ವ್ಯಕ್ತಿಗಳು ಬೆಳ್ತಂಗಡಿ ನಿವಾಸಿ ಇಸ್ಮಾಯಿಲ್(45) ಉಪ್ಪಿನಂಗಡಿ ನಿವಾಸಿಗಳಾದ ನೌಷಾದ್(28) ಫವಾಝ (25)ಇಬ್ರಾಹಿಂ (32)ಹಾಗೂ ಸ್ಥಳೀಯ ಏನೆಕಲ್ ನಿವಾಸಿ ಕೇಶವ ಮಾದನ ಮನೆ (40) ಎಂಬವರಾಗಿದ್ಧಾರೆ. ಗುರುವಾರ ರಾತ್ರಿ ವೇಳೆ ಐವರು ನದಿಯಲ್ಲಿ ದೇವರ ಮೀನು ಇರುವ ಜಾಗದಲ್ಲಿ ಗಾಳ ಹಾಕುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ .ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಸುಬ್ರಹ್ಮಣ್ಯ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ .ಸ್ಥಳೀಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊoಡಿದದ್ಧಾರೆ.ಶುಕ್ರವಾರ ಕಡಬ ತಹಸೀಲ್ದಾರ್ ಕಚೇರಿಗೆ ಒಪ್ಪಿಸಲಾಗಿದ್ದು ಬಳಿಕ ಅವರು ಜಾಮೀನು ಮೂಲಕ ಬಿಡುಗಡೆಯಾಗಿದ್ಧಾರೆ ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…