ಸುಳ್ಯ: ಮಗ ಹಾಗೂ ಪತ್ನಿ ವೃದ್ಧ ಪತಿಯನ್ನು ಬಿಟ್ಟು ಹಲವು ತಿಂಗಳ ಹಿಂದೆ ನಾಪತ್ತೆಯಾಗಿದ್ದು ಒಬ್ಬಂಟಿ ವೃದ್ಧನಿಗೆ ಸ್ಥಳೀಯರು ಮಾನವೀಯತೆ ಮೆರೆದು ಅನಾಥಾಶ್ರಮದ ಭಾಗ್ಯವನ್ನು ಕಲ್ಪಿಸಿದ್ದಾರೆ.
ಸುಳ್ಯದ ಶಾಂತಿನಗರದಲ್ಲಿ ವಾಸವಿದ್ದ ಗೋಪಾಲಕೃಷ್ಣ ಆಶ್ರಮ ಸೇರಿದ ವ್ಯಕ್ತಿಯಾಗಿದ್ದಾರೆ. ಗೋಪಾಲಕೃಷ್ಣ ಅವರ ಪತ್ನಿ ಹಾಗೂ ಮಗ ಕಳೆದ ಕೆಲವು ಸಮಯಗಳಿಂದ ನಾಪತ್ತೆಯಾಗಿದ್ದರು. ಗೋಪಾಲಕೃಷ್ಣ ಅವರ ಪುತ್ರನಿಗೆ ವ್ಯವಹಾರದ ಸಂಬಂಧ ಸಾಲವಾಗಿತ್ತು. ಹೀಗಾಗಿ ಯಾರಿಗೂ ಹೇಳದೇ ವರ್ಷಗಳ ಹಿಂದೆ ಪರಾರಿಯಾಗಿದ್ದರು. ಗೋಪಾಲಕೃಷ್ಣ ಅವರು ಕ್ಯಾಂಪ್ಕೋದ ನಿವೃತ್ತ ಉದ್ಯೋಗಿಯಾಗಿ ದ್ದು ಅವರ ಪತ್ನಿ ಶಿಕ್ಷಕಿಯಾಗಿದ್ದರು. ಮಗನಿಗೆ ಸಾಲವನ್ನು ನೀಡಿದ ಸಾಲಗಾರರು ನಿವೃತ್ತ ದಂಪತಿಗಳನ್ನು ಕಾಡತೊಡಗಿ ದ್ದರು. ಈ ನಡುವೆ ಗೋಪಾಲಕೃಷ್ಣರಿಗೆ ಅಸೌಖ್ಯ ಕಾಡಿದ ಪರಿಣಾಮ ಪತಿ ಹಾಗೂ ಮನೆಯ ಜವಾಬ್ದಾರಿ ಪತ್ನಿಯ ಮೇಲೆ ಬಿದ್ದಿತ್ತು. ಸಾಲಗಾರರು ಪ್ರತಿನಿತ್ಯ ಕಾಡತೊಡಗಿದರು. ಸಾಲ ತೀರಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಹೀಗಾಗಿ ಬಾಧೆ ತಾಳಲಾರದೇ ಗೋಪಾಲಕೃಷ್ಣರನ್ನು ಅವರ ತಮ್ಮನ ಮನೆಯಲ್ಲಿ ಸೇರಿಸಿ 2 ದಿನ ಬಿಟ್ಟು ಬರುತ್ತೇನೆ ಎಂದು ಹೇಳಿ ಹೋದ ಅವರ ಪತ್ನಿ ಇದುವರೆಗೂ ಮರಳಿ ಬಂದಿಲ್ಲ. ಕೆಲ ದಿನ ತಮ್ಮನ ಮನೆಯಲ್ಲೇ ಕಳೆದ ಗೋಪಾಲಕೃಷ್ಣ ನಂತರ ಶಾಂತಿನಗರದ ಮನೆಗೆ ಬಂದಿದ್ದಾರೆ. ತೀವ್ರ ಕೃಷಕಾಯರಾಗಿದ್ದ ಅವರಿಗೆ ಊಟೋಪಚಾರಗಳನ್ನು ಪಕ್ಕದ ಮನೆಯವರು ನೀಡುತ್ತಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ವೃದ್ಧನ ಕಥೆಯ ಕುರಿತು ವರದಿಯಾದ ಬಳಿಕ ಅವರ ಸಹೋದ್ಯೋಗಿಯೊಬ್ಬರು ಪರ್ಯಾ ಯ ವ್ಯವಸ್ಥೆ ಕಲ್ಪಿಸಲು ಮುಂದಾದರು. ಮಡಿಕೇರಿಯ ಶುಂಠಿಕೊಪ್ಪದ ಅನಾಥಾಶ್ರಮವೊಂದಕ್ಕೆ ಸ್ಥಳೀಯರ ಸಹಾಯದಿಂದ ಸೇರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…