ಬೆಂಗಳೂರು: ರಾಜ್ಯದಲ್ಲಿ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಾಕ್ಡೌನ್ ಕೊಂಚ ಸಡಿಲಿಕೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ನೀಡಿದ್ದಾರೆ. ಇಂದು ಮಧ್ಯ ರಾತ್ರಿಯಿಂದಲೇ ಲಾಕ್‌ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಿ ಆದೇಶಿಸಲಾಗಿದೆ.
Advertisement
ರಾಜ್ಯದಲ್ಲಿ ಹೆಚ್ಚು ಕೊರೊನಾ ಪಾಸಿಟಿವ್ ಕಾಣಸಿಕೊಂಡಿರುವ ಕಂಟೈನ್ಮೆಂಟ್ ಝೋನ್, ರೆಡ್ ಝೋನ್ ಹಾಗೂ ಹಾಟ್ ಸ್ಫಾಟ್ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಲಾಕ್ಡೌನ್ ನಿರ್ಬಂಧ ಸಡಿಲಗೊಳಿಸಲಾಗಿದೆ. ಇದರ ಪ್ರಕಾರ ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಅನುಮತಿ ನೀಡಲಾಗಿದ್ದು ಇದರ ಜೊತೆಗೆ ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗೆ ಕಾಮಗಾರಿಗೆ ಅವಕಾಶ , ಕೋರಿಯಾರ್ ಸೇವೆಗೆ ಅನುಮತಿ ಸೇರಿದಂತೆ ಕೆಲವು ವಲಯಕ್ಕೆ ಆದ್ಯತೆ ನೀಡಲಾಗಿದೆ. ಮಾಲ್, ಚಿತ್ರಮಂದಿರ, ಆಟೋ, ವಿಮಾನ, ರೈಲು ಸಂಚಾರ, ಬಸ್ಸು, ಕ್ಯಾಬ್ ಮೊದಲಾದ ಸೇವೆಗಳಿಗೆ ಇರುವ ನಿರ್ಬಂಧ ಎಂದಿನಂತೆಯೇ ಮುಂದುವರೆಯಲಿದೆ.
Advertisement
ಯಾವುದರಲ್ಲಿ ಸಡಿಲಿಕೆ :
- ರಸಗೊಬ್ಬರ, ಎಪಿಎಂಸಿ ಮಾರ್ಕೆಟ್ ಸಂಪೂರ್ಣ ತೆರವು
- ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಅನುಮತಿ
- ಕೃಷಿ ನೀರಾವರಿಗೆ ಯಾವುದೇ ನಿರ್ಬಂಧ ಇಲ್ಲ
- ಅಂತರರಾಜ್ಯ ವಾಹನ ಓಡಾಡಕ್ಕೆ ಅವಕಾಶ
- ಕಟ್ಟಡ ನಿರ್ಮಾಣಕ್ಕೆ ಅನುಮತಿ
- ಕಟ್ಟಡ ಕಾಮಾಗರಿಗಳಿಗೆ ಅನುಮತಿ
- ಟೀ ಕಾಫಿ ಪ್ಲಾಂಟೇಷನ್ಗೆ ಅನುಮತಿ
- ಗ್ರಾಮೀಣ ಪ್ರದೇಶದಲ್ಲಿ ರಸ್ತೆಗೆ ಕಾಮಗಾರಿಗೆ ಅವಕಾಶ
- ಪಶುಸಂಗೋಪನೆಗೆ ಅವಕಾಶ
- ಬ್ಯಾಂಕುಗಳ ನಿರ್ವಹಣೆಗೆ ಮುಂದುವರಿಕೆ
- ಹೋಟೆಲ್ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಅವಕಾಶ
- ಕೋರಿಯಾರ್ ಸೇವೆಗೆ ಅನುಮತಿ
- ಪಾಸ್ ಇದ್ದವರಿಗೆ ಸಂಚಾರಕ್ಕೆ ಅವಕಾಶ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement