ಪುತ್ತೂರು: ಕಳೆದ 25 ವರ್ಷಗಳಿಂದ ಪುತ್ತೂರು ಕೋಟಿ-ಚೆನ್ನಯ ಕಂಬಳದಲ್ಲಿ ಸಕ್ರೀಯರಾಗಿದ್ದು,ಕಂಬಳ ಯಶಸ್ವಿಯ ಹಿಂದೆ ಎಲಿಕ ಜಯರಾಜ್ ಜೈನ್ ಪಾತ್ರ ಮಹತ್ವದ್ದು.ಆರೋಗ್ಯಯುತರಾಗಿದ್ದುಕೊಂಡು ಅಕಾಲಿಕ ಮರಣವನ್ನಪ್ಪಿರುವುದು ಬೇಸರದ ಸಂಗತಿ ಎಂದು ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅದ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ನುಡಿದರು.
ಅವರು ಇತ್ತೀಚೆಗೆ ನಿಧನರಾದ ಎಲಿಕ ಜೈನ್ ಗೆ ದರ್ಬೆ ಪ್ರವಾಸಿ ಮಂದಿರದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಂಬಳ ತೀರ್ಪುಗಾರ ನಿರಂಜನ್ ರೈ ಮಠಂತಬೆಟ್ಟು, ನ್ಯಾಯವಾದಿಗಳಾದ ಕುಂಬ್ರ ದುರ್ಗಾಪ್ರಸಾದ್ ರೈ, ಈಶ್ವರ ಭಟ್ ಪಂಜಿಗುಡ್ಡೆ,ಸುದರ್ಶನ್ ನಾಯ್ಕ್ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಂಬಳ ಸಮಿತಿಯ ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಸಿಜ್ಲರ್ ಸಾಮೆತ್ತಡ್ಕ,ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ,ಶಿವರಾಮ್ ಆಳ್ವ ಕುರಿಯ,ರೋಶನ್ ರೈ ಬನ್ನೂರು,ವಿಕ್ರಮ್ ಶೆಟ್ಟಿ ಅಂತರ ಕೋಡಿಂಬಾಡಿ,ಶಶಿಕಿರಣ್ ರೈ ನೂಜಿಬೈಲ್,ಕೃಷ್ಣಪ್ರಸಾದ್ ಆಳ್ವ ಚೆಲ್ಯಡ್ಕ,ರೋಶನ್ ರೈ ಬನ್ನೂರು,ಸುಧೀರ್ ಶೆಟ್ಟಿ ನಗರ,ಅಖಿಲ್ ಸಾಮೆತ್ತಡ್ಕ,ಸುದೇಶ್ ಚಿಕ್ಕಪುತ್ತೂರು,ಲೂಯಿಸ್,ಜಿನ್ನಪ್ಪ,ಜೋಕೀಂ ಡಿ’ಸೋಜ,ನವೀನ್ ಚಂದ್ರ ನಾಯ್ಕ್,ಪ್ರಕಾಶ್ಚಂದ್ರ ಆಳ್ವ,ಇಸಾಕ್ ಸಾಲ್ಮರ,ಹಸೈನಾರ್ ಬನಾರಿ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…