ಉಜಿರೆ: ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ಬದ್ಧತೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಕಂಬಳ ಕ್ರೀಡೆಗೂ ಒಳ್ಳೆಯ ಕಾಲ ಹಾಗೂ ಒಂದು ಯೋಗ ಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ತಮ್ಮ ನಿವಾಸದಲ್ಲಿ ಕಂಬಳಗಳ ಕೋಣಗಳ ಓಟದಲ್ಲಿ ದಾಖಲೆ ನಿರ್ಮಿಸಿದ ಮೂಡಬಿದ್ರೆ ಬಳಿ ಅಶ್ವತ್ಥಪುರ ನಿವಾಸಿ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಗೆಲುವು ಬಂದಾಗ ಹಿಗ್ಗದೆ, ಸೋಲು ಬಂದಾಗ ಕುಗ್ಗದೆ ಸಮತೋಲನದಲ್ಲಿರಬೇಕು. ಸ್ಥಿಮಿತ ಕಳೆದುಕೊಳ್ಳಬಾರದು. ಸಭೆ-ಸಮಾರಂಭಗಳಿಗೆ ಹೋಗುವಾಗ ಪ್ಯಾಂಟು ಹಾಕಬಾರದು. ಬಿಳಿ ಧೋತಿ ಉಡಬೇಕು ಎಂದು ಹೊಸ ವೇಸ್ಟಿಯನ್ನು ಉಡುಗೊರೆಯಾಗಿ ನೀಡಿದರು.
ಮಾಜಿ ಸಚಿವ ಕೆ.ಅಭಯಚಂದ್ರಜೈನ್, ಕಂಬಳ ಅಕಾಡೆಮಿ ಸಂಚಾಲಕ ಕೆ ಗುಣಪಾಲ ಕಡಂಬ, ಎಸ್.ಡಿ. ಸಂಪತ್ ಸಾಮ್ಯಾಜ್ಯ ಶಿರ್ತಾಡಿ, ಕೋಣಗಳ ಮಾಲಕ ಸತೀಶ್ಚಂದ್ರ ಸಾಲಿಯಾನ್ ಇರುವೈಲ್, ಕಂಬಳ ಅಕಾಡೆಮಿ ನಿರ್ದೇಶಕರುಗಳಾದ ಜ್ವಾಲಾ ಪ್ರಸಾದ್ ಈದು, ಸುಭಾಶ್ಚಂದ್ರ ಚೌಟ ಮೂಡಬಿದ್ರೆ, ಮಂಗಳೂರು ಎ.ಪಿ.ಎಂ.ಸಿ.ಅಧ್ಯಕ್ಷ ಪ್ರವೀಣಕುಮಾರ್ ಜೈನ್, ಚಿಂತನ್ ಲೋಬೊ, ತರಬೇತುದಾರ ದಿನೇಶ್ ಅಳಿಯೂರು ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…