ಕಟ್ಟದ ಈ ಸೇತುವೆ ಅಭಿವೃದ್ಧಿಗೆ “ಮೈಲಿಗೆ”ಯೇ…?, ಹಾಗಂತ ಕೇಳ್ತಾರೆ ಜನ…!

May 4, 2019
9:30 AM

ಕೊಲ್ಲಮೊಗ್ರ: ಕಳೆದ 3 ವರ್ಷಗಳಿಂದ ಮೋರಿಯೊಂದು ಕುಸಿಯಲು ಸಿದ್ಧವಾಗಿದೆ. ಇಂದೋ ನಾಳೆಯೋ ಬೀಳುವ ಹಂತದಲ್ಲಿದೆ. ಹಾಗಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತಿಲ್ಲ ಅಂತ ಜನ ಬೊಬ್ಬೆ ಹೊಡೆಯುತ್ತಾರೆ. ಯಾರಾದ್ರೂ ಸ್ವಲ್ಪ ಈ ಕಡೆ ನೋಡ್ತೀರಾ ? ಹಾಗಿದ್ರೆ ಇಲ್ಲಿದೆ ನೋಡಿ ಸ್ಟೋರಿ….

Advertisement
ಶಿಥಿಲಗೊಂಡ ಸೇತುವೆ

ಕೊಲ್ಲಮೊಗ್ರು ಗ್ರಾಮದ  ಕೊಲ್ಲಮೊಗ್ರದಿಂದ ಕಟ್ಟ – ಕರಂಗಲ್ಲು – ಮಡಪ್ಪಾಡಿಗೆ ನೇರ ಸಂಪರ್ಕ ಇರುವ ಜಿಪಂ  ರಸ್ತೆ ಇದೆ. ಇಲ್ಲಿ  ಕಟ್ಟ – ಮೈಲ ಎಂಬಲ್ಲಿ ಒಂದು ಮೋರಿ ಇದೆ. ಕಳೆದ ಮೂರು ವರ್ಷದ ಹಿಂದೆಯೇ ಮೋರಿಯೊಂದು ಇಂದೋ ನಾಳೆಯೋ ಅನ್ನೋ ಸ್ಥಿತಿಯಲ್ಲಿದೆ.  ಹೀಗಾಗಿ ಈ ಮೋರಿ ಕುಸಿತವಾದರೆ ಸಂಪರ್ಕ ಕಡಿತವಾಗುವ ಭೀತಿ ಇದೆ. ಈ ಸಮಸ್ಯೆ ಬಗ್ಗೆ ಅನೇಕ ಬಾರಿ ಅಧಿಕಾರಿಗಳು ಬಂದು ಪರೀಕ್ಷಿಸಿ ಸದ್ಯದಲ್ಲೇ  ನಿರ್ಮಾಣ ಮಾಡಿ ಕೊಡುವ ಭರವಸೆ ನೀಡಿದ್ದರೂ ಮೂರು ಮಳೆಗಾಲ ಕಳೆದು ಇನ್ನೂ ಮೋರಿ ಮಾತ್ರಾ ಆಗಿಲ್ಲ.

ಕುಸಿತಗೊಂಡ ಸೇತವೆ

ಈ ವರ್ಷದ ಮಳೆಗಾಲದಲ್ಲಿ ಇಲ್ಲಿ ವಾಹನ ಸಂಚಾರ ಕಷ್ಟವಾಗಲಿದೆ, ಅದೂ ಅಲ್ಲದೆ ನಡೆದು ಹೋಗಲೂ ಕಷ್ಟವಾಗುವ ಸಂಭವ ಇದೆ ಎಂದು ಸ್ಥಳೀಯರು ಅಳಲು ತೋಡುತ್ತಾರೆ.  ಎಲ್ಲಾ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದ ತಕ್ಷಣವೇ ಕ್ರಮವಾಗಬೇಕು, ಕನಿಷ್ಠ ದುರಸ್ತಿಯಾದರೂ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುಳ್ಯನ್ಯೂಸ್.ಕಾಂ ಜೊತೆ ಮಾತನಾಡಿದ ಸ್ಥಳೀಯರಾದ ಮಿಥುನ್ ಕುಮಾರ್ ಸೋನ, ” ಕಳೆದ 3 ವರ್ಷಗಳಿಂದ ಈ ಮೋರಿ ದುರಸ್ತಿಗೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರೂ ಯಾವುದೇ ಕ್ರಮ ಆಗಿಲ್ಲ, ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು” ಎಂದು ಒತ್ತಾಯಿಸಿದ್ದಾರೆ.

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ : ಮಳೆಯ ಕೊರತೆ ಪರಿಣಾಮ
February 22, 2026
9:50 AM
by: ದ ರೂರಲ್ ಮಿರರ್.ಕಾಂ
ಭಾರತ–ಬ್ರೆಜಿಲ್ ಕೃಷಿ ಸಹಕಾರ : ನೈಸರ್ಗಿಕ ಕೃಷಿಗೆ ಒತ್ತು, ಶೀಘ್ರದಲ್ಲೇ MoU
February 22, 2026
9:44 AM
by: ದ ರೂರಲ್ ಮಿರರ್.ಕಾಂ
ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ
February 21, 2026
8:36 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?
February 21, 2026
2:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror