ಕಡಬ : ರಾಜ್ಯದಲ್ಲಿ ನೂತನ ತಾಲೂಕುಗಳ ಘೋಷಣೆ ಬಳಿಕ ಇದೀಗ ಗ್ರಾಮೀಣಾಭಿವೃದ್ದಿ ಹಾಗೂ ಗ್ರಾಮೀಣ ಸೇವೆಗಳು ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮಕ್ಕಾಗಿ ನೂತನ ತಾಲೂಕು ಪಂಚಾಯತ್ ರಚನೆಯಾಗಲಿದೆ. ಹೀಗಾಗಿ ಕಡಬ ತಾಲೂಕು ರಚನೆಯಾಗಲಿದೆ. ಸರಕಾರ ಜೂ.12 ರಂದು ಈ ಬಗ್ಗೆ ಅಧಿಕೃತ ಘೊಷಣೆ ಮಾಡಿದೆ. ಅದರಲ್ಲಿ ಕಡಬ ತಾಲೂಕು ಸೇರಿದೆ. ಇನ್ನು ಕಡಬ ತಾಲೂಕು ಪಂಚಾಯತ್ ಆಡಳಿತ ಇರಲಿದೆ.
ರಾಜ್ಯದಲ್ಲಿ ಇದೀಗ 50 ತಾಲೂಕು ಪಂಚಾಯತ್ ರಚನೆಯಾಗಲಿದ್ದು ಪ್ರತೀ ತಾಲೂಕಿಗೆ 14 ಹುದ್ದೆಗಳಂತೆ 700 ಹುದ್ದೆಗಳು ಸೃಷ್ಟಿಯಾಗಲಿದೆ. ಈ ಬಗ್ಗೆ ಇಂದು ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಪಂಚಾಯತ್ ರಾಜ್ ಇಲಾಖೆಯು ಈ ಬಗ್ಗೆ ವಿಶೇಷ ಕಾಳಜಿ ವಹಿಸಿದೆ.
ಕಡಬ ತಾಲೂಕು ರಚನೆಯಾದ ಬಳಿಕ ಇದೀಗ ಕಡಬ ತಾಲೂಕು ಪಂಚಾಯತ್ ರಚನೆಯಾಗುವ ಮೂಲಕ ಕಡಬದ ಅಭಿವೃದ್ಧಿಗೆ ಪೂರಕವಾಗಲಿದೆ.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…