(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ದಂಬ’)
ಪ್ರಸಂಗ : ಸಹಸ್ರಕವಚ ಮೋಕ್ಷ
(ಸಂದರ್ಭ : ನರನಾರಾಯಣರೊಂದಿಗೆ ಹೋರಾಡಿ ಸೋತ ದಂಬನಿಗೆ ಜ್ಞಾನೋದಯ)
“.. ಅಹಂಕಾರಕ್ಕೆ ಎಷ್ಟು ಪೊದರುಗಳು. ಸಾಮಾನ್ಯ ಮೃಗಪಕ್ಷಿಗಳಿಗಿದ್ದಂತಹ ತಪೋಗುಣದ ಅಹಂಕಾರವೇ ಒಂದು ಪೊದರಾಗಿ ಪರಿಣಮಿಸುತ್ತದೆ; ಬಂಧನಕಾರಕವಾಗುತ್ತದೆ. ಸೌಂದರ್ಯವೂ ಬಂಧನಕಾರವಾಗುತ್ತದೆ. ಕ್ರೌರ್ಯವೂ ಬಂಧನಕಾರಕವಾಗುತ್ತದೆ. ರಾಜರು ಹುಲಿ, ಶಾರ್ದೂಲಾದಿಗಳನ್ನು ಬಂಧನದಲ್ಲಿ ಕಟ್ಟಿ ಹಾಕುತ್ತಾರೆ. ಕೋಗಿಲೆ, ಗಿಳಿ, ನವಿಲು.. ಇತ್ಯಾದಿ ಪ್ರಾಣಿಪಕ್ಷಿಗಳನ್ನು ಬಂಧಿಸುತ್ತಾರೆ… ನಾನು ನಾನಾಗಿ ನನ್ನ ಮೈಮೇಲೆ ಹಾಕಿಕೊಂಡ ಮುಸುಕುಗಳು ಎಷ್ಟು? ಒಂದೋ.. ಎರಡೋ… ಮೂರೋ.. ನೂರೋ… ಒಂಬೈನೂರ ತೊಂಭತ್ತೊಂಭತ್ತು. ಇದು ಕತ್ತಲೆಯ ಆವರಣಗಳು. ನಾನು ಎದ್ದು ಬಂದದ್ದೇ ವಿಚತ್ರ! ಬಹುಶಃ ನಮ್ಮದ್ದಾದ ವಿಭೂತಿಮತ್ತಾದ ಶಕ್ತಿ ವಿಶೇಷವದು.
ಆದರೆ ಒಂದು ವಿಶ್ವಾಸ. ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು. ಆದರೆ ಒಂದು ದೀಪ ಉರಿಸಿದರೆ ಅದರ ನಾಶಕ್ಕೆ ನೂರು ವರುಷ ಬೇಕಾಗುವುದಿಲ್ಲ. ಈಗ ನಿಮ್ಮಲ್ಲಿ ಹೋರಾಟ ಮಾಡಿದ್ದರಿಂದ ನಿಮ್ಮಿಂದ ಕಳಚಲ್ಪಟ್ಟಂತಹ ಕವಚಗಳು ಒಂಭೈನೂರ ತೊಂಭತ್ತ ಒಂಭತ್ತು ಹೋಗಿ ಈಗ ಕೇವಲ ಒಬ್ಬ ಜೀವ ಮಾತ್ರನಿಗೆ ಮೋಕ್ಷ ಸಾಧನೆಗೆ ಬೇಕಾದ ಮಾರ್ಗವೆಂಬಂತೆ ಒಂದೇ ಕವಚ ಉಳಿದಿದೆ. ಸೂರ್ಯನಿಂದ ಏನು ಅನುಗ್ರಹ ಪಡೆದರೇನು? ಸಾವಿರಾರು ವರುಷಗಳಿಂದ ‘ಪುನರಪಿ ಜನನಂ, ಪುನರಪಿ ಮರಣಂ’ ಕಾಮ, ಕಾಂಚನ, ಕೀರ್ತಿ.. ಹೀಗೆ ಹೊದಿಕೆಯೇ ತುಂಬಿದೆ. ಇಂತಹ ಮಾಯೆಯ ಹೊದಿಕೆಯಿಂದ ಇಂದು ಹೊರಗೆ ಬಂದಿದ್ದೇನೆ. ನಿಮ್ಮ ಅನುಗ್ರಹದಿಂದ ಕೃತಾರ್ಥನಾದೆ…
ಊರ್ವಶಿ ಎಂಬವಳು ದಂಬೋದ್ಬವ ಎಂಬ ಜೀವನಿಗೆ ಕತ್ತಲೆಯನ್ನು ಬೀರಿದಂತಹ ನಾರಾಯಣನ ಮಾಯೆ. ಯಾವ ತಾಯಿ ಹೆತ್ತ ಮಗಳು ಅವಳಲ್ಲ. ಕೇವಲ ನಿಮ್ಮ ಸಂಕಲ್ಪದಿಂದ ಹುಟ್ಟಿದ್ದು. ಮೋಹದ ಅಂಧಕಾರದಲ್ಲಿ ಕೆಡಹಿ ಅವಳ ಜನ್ಮಸ್ಥಾನವಾದಂತಹ ಪಿತೃವಿನ ಸನ್ನಿಧಾನಕ್ಕೆ ನನ್ನನ್ನು ಎಳೆತಂದದ್ದು. ಪ್ರಕೃತಿಯಾಗಲೀ, ಮಾಯೆಯಾಗಲೀ ಅವಳು ಯೋಗ ಮಾಯೆಯಾಗಿ ಜೀವನನ್ನು ಆಕರ್ಷಿಸಿದಳು ಎಂತಾದರೆ, ನಿಜವಾದ ಪಿತೃ ಸ್ಥಾನಕ್ಕೆ ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುತ್ತಾಳೆ. ನರನಾರಾಯಣರೆಂಬ ಉಭಯರಿಗೆ ಹುಟ್ಟಿದಂತಹ ಮಗಳು ಅವಳು. ಇದು ನಿಮ್ಮ ಸಂಕಲ್ಪ. ನಿಮ್ಮ ಶುದ್ಧ ಸಂಕಲ್ಪದ ಆವರಣವೇ ಅವಳ ಮೈ ಆಗಿರುತ್ತದೆಯೇ ಹೊರತು ಶುಕ್ಲ ಶೋಣಿತ ಸಮ್ಮಿಶ್ರಣವಾದುದಲ್ಲ. ಆದ ಕಾರಣ ಅವಿದ್ಯಾ ರೂಪಿಣಿಯಾಗಿ ನನ್ನನ್ನು ಎಳೆದರೂ ಕೊನೆಗೆ ವಿದ್ಯಾರೂಪಿಣಿಯಾಗಿ ನಿಮ್ಮ ದರ್ಶನವನ್ನು ಮಾಡಿದ್ದರಿಂದ ಈ ಹೊತ್ತು ಒಂದು ಬಯಕೆ ಉಳಿದಿದೆ…. ಉಳಿದೊಂದು ಕವಚಕ್ಕೆ ಮಾರ್ಗ ಸೂಚಿಸಿ…..
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…