ಕನಕಮಜಲು:ಅಂತರಾಷ್ಟ್ರೀಯ ಯೋಗ ದಿನಾಚರಣೆ ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ (ರಿ ) ಕನಕಮಜಲು ಇದರ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವ್ಯ. ಸೇ. ಸ. ಬ್ಯಾಂಕ್ ಕನಕಮಜಲು ಇದರ ‘ಕನಕ ಸೌದ ‘ಸಭಾಭವನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕರಾಟೆ ಶಿಕ್ಷಕರಾದ ಚಂದ್ರಶೇಖರ ಕುದ್ಕುಳಿ ಇವರು ಸೂರ್ಯನಮಸ್ಕಾರ, ಸ್ಥಿರ ಮತ್ತು ಅದರ ಮಹತ್ವಗಳನ್ನು ತಿಳಿಸಿಕೊಟ್ಟರು. ಹಾಗೇ ನಿವೃತ್ತ ಶಿಕ್ಷಕರು, ಯೋಗ ಶಿಕ್ಷಕರು ಅದ ಆನಂದ ಮಾಸ್ತರ್ ಅಕ್ಕಿಮಲೆ ಇವರು ಪ್ರಾಣಾಯಾಮ ಬಗ್ಗೆ ಆಹಾರ ಪದ್ಧತಿ ಗಳ ಬಗ್ಗೆ ಮತ್ತು ಅರೋಗ್ಯವಂತ ಜೀವನಕ್ಕೆ ಬೇಕಾದ ಕೆಲವು ವಿಷಯಗಳನ್ನು ತಿಳಿಸಿದರು. ಹಾಗೇ ಮಳೆಗಾಲದ ಬೇಸಾಯಕ್ಕೆ ಬೇಕಾದ ತರಕಾರಿ ಬೀಜಗಳನ್ನು ಗ್ರಾಮಸ್ಥರಿಗೆ ಯುವಕ ಮಂಡಲ ವತಿಯಿಂದ ವಿತರಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷರು ಜಯಪ್ರಸಾದ್ ಕಾರಿಂಜ, ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಧರ್ ಕುತ್ಯಾಳ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…