ಎಸ್.ಕೆ.ಎಸ್.ಎಸ್.ಎಫ್ ಆತೂರು ಕ್ಲಸ್ಟರ್ ಇದರ ವತಿಯಿಂದ ಶುಕ್ರವಾರ ಸಂಜೆ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ಅಝ್ಮಿಯಾ ಕಾಂಪ್ಲೆಕ್ಸ್ ವಠಾರದಲ್ಲಿ ಎಸ್.ಕೆ.ಎಸ್.ಎಸ್ ಎಫ್
ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ಧೀಖ್ ನೀರಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವರ್ಗಕ್ಕೂ ಈ ಅನಿಷ್ಟ ಆವರಿಸಿದೆ, ಇದನ್ನು ನಿರ್ಮೂಲನ ಮಾಡಬೇಕಾದರೆ ಯುವ ಜನತೆ ಮುಂದೆ ಬರಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ಕನ್ನಡದ ಆಚರಣೆ ನ. 1ಕ್ಕೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರ ಹಬ್ಬವಾಗಬೇಕು, ಇಂದು ಕನ್ನಡದ ಬಳಕೆ ಎಲ್ಲಾ ಕ್ಷೇತ್ರದಲ್ಲೂ ಕಡಿಮೆಯಾಗಿದೆ, ನಾವು ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಬಳಕೆ ಮಾಡಿದರೆ ಭಾಷೆ , ಸಂಸ್ಕೃತಿ ಉಳಿಯಬಹುದು ಎಂದೂ, ಮಾದಕ ವ್ಯಸನದ ಬಗ್ಗೆ ಇಂದು ಇದು ಒಂದು ಫ್ಯಾಷನ್ ಆಗಿ ಹೋಗಿದೆ, ಆದರೆ ಇದು ಮನುಕುಲಕ್ಕೆ ಮಾರಕವಾಗಿರುವುದರಿಂದ ಇದರ ವಿರುದ್ಧ ಜಾಗೃತಿ ಅನಿವಾರ್ಯವಾಗಿದೆ ಎಂದರು.
ಕರಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆತೂರು ರೇಂಜ್ ಮದ್ರಸ ಮನೇಜ್ಮೆಂಟ್ ಅಸೋಸಿಯೇಶನ್ನ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬಿ. ಕೆ ಆತೂರು, ಬದ್ರಿಯಾ ಶಾಲೆಯ ಆತೂರು ಇದರ ಸಂಚಾಲಕರಾದ ಆದಂ ಪಿಲಿಕುಡೆಲ್, ಅಯ್ಯುಬ್ ಹಾಜಿ ಅಮೈ, ರೇಂಜ್ ಮದ್ರಸ ಮೇನೇಜ್ಮೆಂಟ್ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಗಂಡಿಬಾಗಿಲು, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಅಬ್ದುಲ್ ಅಝೀಝ್ ಬಿ.ಕೆ, ಕೊಯಿಲಾ ಗ್ರಾಮ ಫಂಚಾಯತ್ ಸದಸ್ಯ ಕೆ ಎ ಸುಲೈಮಾನ್, ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹೀಮಾನ್, ಸಿರಾಜ್, ಇಸ್ಮಾಈಲ್ ತಂಙಳ್ ಉಪ್ಪಿನಂಗಡಿ, ಇಬ್ರಾಹಿಂ ಮಜಲ್ ಅತಿಥಿಗಳಾಗಿ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಮುಸ್ಲಿಯಾರ್, ಅಬ್ದುಲ್ ರಝಾಕ್ ದಾರಿಮಿ ನೇರೆಂಕಿ, ಮುನೀರ್ ಅನ್ವರಿ, ಮೂಸಾ ಮುಸ್ಲಿಯಾರ್, ರೇಂಜ್ ಗೊಳಪಟ್ಟ ಮದ್ರಸಗಳ ಮುಖ್ಯಗುರುಗಳು, ಸಹಅಧ್ಯಾಪಕರು, ಆತೂರು ಕ್ಲಸ್ಟರ್ ಪ್ರಥಿನಿಧಿಗಲು ಜಕಾರಿಯಾ ಮುಸ್ಲಿಯಾರ್, B R ಅಬ್ದುಲ್ ಖಾದರ್, ಇಸ್ಮಾಈಲ್ ಪಾಲ್ಟಾಡಿ, ಅಶ್ರಫ್ ಕುದ್ಲೂರು, ಇಸ್ಮಾಈಲ್ ಆತೂರುಬೈಲು, ಹನೀಫ್ ಪೆರಿಯಡ್ಕ, ಹನೀಫ್ ನೀರಾಜೆ, ಖಲಾಂದರ್ ಗಂಡಿಬಾಗಿಲು, ಅಬ್ದುಲ್ ರಹೀಮಾನ್ ಅರ್ಷಾದಿ, ಅಜೀಜ್ ಪಾಲ್ಟಾಡಿ, ಉಮರುಲ್ ಫಾರೂಕ್.ಬಿ, ಸಿದ್ಧೀಖ್ ಎನ್, ಇಕ್ಬಾಲ್, ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳು, ಮದ್ರಸ ಮೇನೇಜ್ಮೆಂಟ್ ಪದಾಧಿಕಾರಿಗಳು, ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಎಸ್.ಕೆ.ಎಸ್.ಎಸ್ ಎಫ್ ಕ್ಯಾಂಪಸ್ ವಿಂಗ್ ಆತೂರು ಕ್ಲಸ್ಟರ್ ಕನ್ವೀನರ್ ರಾಝಿಕ್ ಸ್ವಾಗತಿಸಿದರು. ಎಸ್.ಕೆ.ಎಸ್.ಎಸ್ ಎಫ್ ಆತೂರು ಕ್ಲಸ್ಟರ್ ಸದಸ್ಯ ರಫೀಕ್ ಗೊಳಿತ್ತಡಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಮಾಡಿದರು.