ಕಮಿಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟನೆ

August 25, 2019
11:43 AM

ಗುತ್ತಿಗಾರು: ಬಾಂಧವ್ಯ ಗೆಳೆಯರ ಬಳಗದ ವತಿಯಿಂದ ಕಮಿಲದಲ್ಲಿ ನಡೆಯುತ್ತಿರುವ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು  ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಉದ್ಘಾಟಿಸಿ ಶುಭಹಾರೈಸಿದರು.

Advertisement

ಮುಖ್ಯಅತಿಥಿಗಳಾಗಿದ್ದ ತಾಪಂ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ, ಶ್ರೀಕೃಷ್ಣ ಬದುಕು ನಮ್ಮೆಲ್ಲರ ಬದುಕಿಗೆ ಆದರ್ಶ. ಸಾಮಾಜಿಕವಾಗಿಯೂ ಧಾರ್ಮಿಕವಾಗಿಯೂ ಶ್ರೀಕೃಷ್ಣನ ನಡೆ ಮೆಚ್ಚುವಂತಹದ್ದೇ ಹೀಗಾಗಿ ಆತ ಪರಮಾತ್ಮನಾಗಿ ನಮಗೆಲ್ಲರಿಗೂ ಮಾದರಿಯಾಗಿದ್ದಾನೆ ಎಂದರು. ಯುವ ಸಮುದಾಯವು ಸಂಘಟನಾತ್ಮಕವಾಗಿ ಮಾಡುವ ಇಂತಹ ಕಾರ್ಯಕ್ರಮಕ್ಕೆ ಸದಾ ಬಂಬಲನೀಡುವುದಾಗಿ ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ತೇಜಪ್ಪ ಮಾಸ್ತರ್ ಸಂಪ್ಯಾಡಿ, ಯುವಕರು ನಿರಂತರವಾಗಿ ಸಮಾಜಮುಖಿಯಾಗಿ ತೊಡಗಿಸಿಕೊಂಡಾಗ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯವಿದೆ. ಧಾರ್ಮಿಕ ಹಾಗೂ ಸಾಮಾಜಿಕವಾಗಿ ಯುವಕರು ಸಕ್ರಿಯವಾಗಿರಬೇಕು ಎಂದು  ಹೇಳಿದರು.

ಸಭಾಧ್ಯಕ್ಷತೆಯನ್ನು ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ಪ್ರಸನ್ನ ಮುಳುಬಾಗಿಲು ವಹಿಸಿದ್ದರು.ವೇದಿಕೆಯಲ್ಲಿ ರಕ್ತೇಶ್ವರಿ ಸಾನ್ನಿಧ್ಯದ ಆಡಳಿತ ಮಂಡಳಿ ಅಧ್ಯಕ್ಷ ತುಂಗನಾಥ ಕಾಯನಕೋಡಿ, ಗ್ರಾಪಂ ಮಾಜಿ ಸದಸ್ಯ ರಾಧಾಕೃಷ್ಣ ತುಪ್ಪದಮನೆ ಮೊದಲಾದವರು ಉಪಸ್ಥಿತರಿದ್ದರು.

Advertisement

ಲೋಕೇಶ್ ಕಮಿಲ ಸ್ವಾಗತಿಸಿ ದಾಮೋದರ ಕಾರ್ಯಕ್ರಮ ನಿರೂಪಿಸಿದರು.

Advertisement

ಸಭಾಕಾರ್ಯಕ್ರಮದ ಬಳಿಕ ಮೊಸರು ಕುಡಿಕೆ ಹಾಗೂ ವಿವಿಧ ಸ್ಫರ್ಧೆಗಳು ನಡೆಯುತ್ತಿವೆ.

 

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group