ಮಂಗಳೂರು/ಸುಳ್ಯ: ಕರಾವಳಿ ತೀರ, ಗೋವಾ ಹಾಗೂ ಕೊಂಕಣ ಪ್ರದೇಶದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಈ ಮಳೆಯಾಗಲಿದೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ “ಕ್ಯಾರ್” ಚಂಡಮಾರುವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ. ಶುಕ್ರವಾರ ಹಾಗೂ ಶನಿವಾರ ಭಾರೀ ಮಳೆಯ ಸೂಚನೆ ಇದೆ. ನಾಳೆಯಿಂದಲೇ ಅಂದರೆ ಅ.24 ರಿಂದಲೇ ಮಳೆ ಹೆಚ್ಚಾಗುವ ಲಕ್ಷಣಗಳು ಕಾಣಿಸಿದೆ.
ಕಳೆದ ಕೆಲವು ದಿನಗಳಿಂದ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ವಾಯುಭಾರ ಕುಸಿತ ಕಂಡುಬಂದಿದೆ. ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಂಡುಬಂದಿರುವ ಕುಸಿತವು ಕರಾವಳಿ ಕಡೆಗೆ ಆಗಮಿಸುತ್ತಿದೆ.ಇದರಿಂದ ಗೋವಾ, ಕೊಂಕಣ ಮತ್ತು ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಿಗೆ ಆತಂಕವಿದೆ. “ಕ್ಯಾರ್” ಚಂಡಮಾರುತವಾಗಿ ಅಪ್ಪಳಿಸಿದರೆ ಭಾರೀ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ರತ್ನಾಗಿರಿ, ಗೋವಾ, ಕಾರವಾರ, ಮಂಗಳೂರು , ಉಡುಪಿ ಮುಂತಾದ ನಗರಗಳಿಗೆ ಅಪಾಯವಿದೆ. ಮುಂಬೈಯಲ್ಲಿ ಹೆಚ್ಚಿನ ಮಳೆಯೂ ಇರಬಹುದು.