ಕರಾವಳಿ ತೀರದಲ್ಲಿ ಭಾರೀ ಮಳೆ ಸಾಧ್ಯತೆ ; ಕರಾವಳಿಗೆ ಹತ್ತಿರವಾಗುತ್ತಿದೆ “ಕ್ಯಾರ್” ಚಂಡಮಾರುತ

October 23, 2019
10:23 PM

ಮಂಗಳೂರು/ಸುಳ್ಯ: ಕರಾವಳಿ ತೀರ, ಗೋವಾ ಹಾಗೂ ಕೊಂಕಣ ಪ್ರದೇಶದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಈ ಮಳೆಯಾಗಲಿದೆ.  ಹೀಗಾಗಿ ಮುಂದಿನ 48 ಗಂಟೆಗಳಲ್ಲಿ “ಕ್ಯಾರ್” ಚಂಡಮಾರುವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ.  ಶುಕ್ರವಾರ ಹಾಗೂ ಶನಿವಾರ ಭಾರೀ ಮಳೆಯ ಸೂಚನೆ ಇದೆ. ನಾಳೆಯಿಂದಲೇ ಅಂದರೆ ಅ.24 ರಿಂದಲೇ ಮಳೆ ಹೆಚ್ಚಾಗುವ ಲಕ್ಷಣಗಳು ಕಾಣಿಸಿದೆ.

ಕಳೆದ ಕೆಲವು ದಿನಗಳಿಂದ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ವಾಯುಭಾರ ಕುಸಿತ ಕಂಡುಬಂದಿದೆ. ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಂಡುಬಂದಿರುವ ಕುಸಿತವು ಕರಾವಳಿ ಕಡೆಗೆ ಆಗಮಿಸುತ್ತಿದೆ.ಇದರಿಂದ ಗೋವಾ, ಕೊಂಕಣ ಮತ್ತು ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಿಗೆ ಆತಂಕವಿದೆ. “ಕ್ಯಾರ್” ಚಂಡಮಾರುತವಾಗಿ ಅಪ್ಪಳಿಸಿದರೆ ಭಾರೀ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.  ರತ್ನಾಗಿರಿ, ಗೋವಾ, ಕಾರವಾರ,  ಮಂಗಳೂರು , ಉಡುಪಿ ಮುಂತಾದ ನಗರಗಳಿಗೆ ಅಪಾಯವಿದೆ. ಮುಂಬೈಯಲ್ಲಿ ಹೆಚ್ಚಿನ ಮಳೆಯೂ ಇರಬಹುದು.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುಟ್ಕಾ ಪ್ರಕರಣಗಳಲ್ಲಿ ಎಂಸಿಒಸಿಎ ಜಾರಿ ಪ್ರಶ್ನಿಸಿದ ಬಾಂಬೆ ಹೈಕೋರ್ಟ್ – ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೋರಿದ ಕೋರ್ಟ್
July 9, 2026
9:28 PM
by: ದ ರೂರಲ್ ಮಿರರ್.ಕಾಂ
ಗುಟ್ಕಾ ಜಾಲಕ್ಕೆ ಮಹಾರಾಷ್ಟ್ರದ ಭಾರೀ ಹೊಡೆತ..! 700ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲು – ಕಳಪೆ ಅಡಿಕೆ ಸಾಗಾಟವೂ ಈ ವ್ಯಾಪ್ತಿಯಲ್ಲಿ..!
July 9, 2026
9:12 PM
by: ಮಿರರ್‌ ಡೆಸ್ಕ್‌
ಮಂಗಳೂರಿನಲ್ಲಿ ಉದ್ಯೋಗ ಮೇಳ – ಜುಲೈ 14ರಂದು ನೇರ ಸಂದರ್ಶನ – ಬ್ಯಾಂಕ್‌ನಿಂದ ಟೆಕ್ನಿಕಲ್‌ ಹುದ್ದೆಗಳವರೆಗೆ ಅವಕಾಶ
July 9, 2026
8:51 PM
by: ದ ರೂರಲ್ ಮಿರರ್.ಕಾಂ
ಆಘಾತಕಾರಿ ವರದಿ- ಮೇ-ಜೂನ್‌ನಲ್ಲಿ ಭಾರತದ 10 ಮಕ್ಕಳಲ್ಲಿ 7 ಮಂದಿ ಶಾಲೆ ತಪ್ಪಿಸಿದರು..!
July 9, 2026
2:37 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror