ಮಂಗಳೂರು: ಅರಬೀ ಸಮುದ್ರದಲ್ಲಿ ಮತ್ತೆ ಮತ್ತೆ ಚಂಡಮಾರುತ ಸುಳಿ ಹೆಚ್ಚಾಗಿದೆ. ಇದೀಗ ಕ್ಯಾರ್ ಚಂಡಮಾರುತ ತಣ್ಣಗಾಗುವ ವೇಳೆಗೆ “ಮಹಾ” ಚಂಡಮಾರುತ ಅಬ್ಬರಿಸುತ್ತಿದೆ. ಸದ್ಯ ಲಕ್ಷದ್ವೀಪ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದಾದ್ಯಂತ ಚಲಿಸುತ್ತಿದೆ ಚಂಡಮಾರುತ ಚಲಿಸುತ್ತಿದೆ.
ಹವಾಮಾನ ತಜ್ಞರ ಪ್ರಕಾರ, ವಾಯುಭಾರ ಕುಸಿತದ ಪ್ರಭಾವ ಹೆಚ್ಚಾಗಿದ್ದು ಕ್ಯಾರ್ ಚಂಡಮಾರುತಕ್ಕಿಂತಲೂ ಮಹಾ ಚಂಡಮಾರುತ ಪ್ರಭಾವ ಬೀರಲಿದೆ. ಕರಾವಳಿ ಪ್ರದೇಶ ಹಾಗೂ ಒಳನಾಡು ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಸದ್ಯ ಲಕ್ಷದ್ವೀಪ ಮತ್ತು ಪಕ್ಕದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಕೇಂದ್ರೀಕೃತವಾಗಿದೆ. ಮುಂದೆ ಶುಕ್ರವಾರದ ಹೊತ್ತಿಗೆ, ಮಹಾ ಚಂಡಮಾರುತವು ಪ್ರಭಾವ ಹೆಚ್ಚಿಸುತ್ತಾ ಮುಂದಿನ 24 ಗಂಟೆಗಳಲ್ಲಿ ಕರಾವಳಿ ಸಹಿತ ವಿವಿದೆಡೆ ಬಿರುಗಾಳಿಯೊಂದಿಗೆ ಮಳೆಯಾಗಲಿದೆ. ಮೀನುಗಾರರಿಗೆ ಈಗಾಗಲೇ ಮುನ್ನೆಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel