ಪುತ್ತೂರು: ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಆಧೀನದಲ್ಲಿರುವ ಗೇರು ಅಭಿವೃದ್ಧಿ ನಿಗಮದ ನೂತನ ಆಡಳಿತ ಮಂಡಳಿಗೆ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಹಾಗೂ ಪ್ರಭಾರ ನಿರ್ದೇಶಕ ಡಾ. ಯಂ. ಗಂಗಾಧರ ನಾಯಕ್ ರವರು ಕೇಂದ್ರ ಸರಕಾರ ನಾಮ ನಿರ್ದೇಶನದನ್ವಯ ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾರೆ.
ಕೇಂದ್ರ ಸರಕಾರದ ಕೃಷಿ ಹಾಗೂ ರೈತಕಲ್ಯಾಣ ಮಂತ್ರಾಲಯದ ತೋಟಗಾರಿಕಾ ಆಯುಕ್ತರು ಕೊಚಿನ್ ನಲ್ಲಿರುವ ಗೇರು ಹಾಗೂ ಕೋಕೋ ಅಭಿವೃದ್ಧಿಯ ನಿರ್ದೇಶಕರ ಶಿಫಾರಿಸ್ಸಿನ ಮೇರೆಗೆ ಈ ನೇಮಕಾತಿಯನ್ನು ಮಾಡಿರುತ್ತಾರೆ.
ಡಾ ಯಂ.ಜಿ. ನಾಯಕ್ ರವರು ಕಳೆದ 30 ವರ್ಷಗಳಿಂದ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ತೋಟಗಾರಿಕಾ ವಿಜ್ಞಾನಿಯಾಗಿದ್ದು ತಳಿ ಅಭಿವೃದ್ಧಿ, ವೈವಿಧ್ಯತೆ ಸಂರಕ್ಷಣೆ, ಪುನಶ್ಚೇತನ, ಸಾಂದ್ರ ಮತ್ತು ಘನ ಸಾಂದ್ರ ಗೇರು ಕೃಷಿ ಪದ್ದತಿ, ಗೇರು ನರ್ಸರಿ ಹಾಗೂ ಯೋಗ್ಯ ತಳಿಗಳ ಗಿಡಗಳನ್ನು ರೈತರಿಗೆ ಒದಗಿಸುವುದು, ರೈತರಿಗೆ ಹಾಗೂ ಅಭಿವೃದ್ಧಿ ಇಲಾಖೆಗಳಿಗೆ ಮಾಹಿತಿ ಹಾಗೂ ಸಲಹೆ ನೀಡುವಿಕೆ ಮೂಲಕ ಗೇರು ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ಕೊಟ್ಟಿರುತ್ತಾರೆ. ರೈತರೊಂದಿಗೆ ನೇರ ಸಂಪರ್ಕ ಹಾಗೂ ಕೃಷಿ ವಿಸ್ತರಣೆಯಲ್ಲಿ ಬಹಳಷ್ಟು ಶ್ರಮಿಸಿರುತ್ತಾರೆ. ಗೇರು ಅಭಿವೃದ್ಧಿ ನಿಗಮದ ಆಡಳಿತ ಮಂಡಳಿಯ ಸದಸ್ಯತ್ವ ಇದೀಗ ಇವರ ಸಾಧನೆಗೆ ಹಿಡಿದ ಕೈಗನ್ನಡಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…