ಸುಳ್ಯ: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಹಿರಿಯ ಪಿಡಬ್ಲ್ಯೂಡಿ ಗುತ್ತಿಗೆದಾರ ಕಾರಡ್ಕದ ಕೆ. ಗಂಗಾಧರನ್ ನಾಯರ್ ಉದ್ಘಾಟಿಸಿದರು.
ಸಾಮಾಜಿಕ ಧುರೀಣ ಕೆ.ಕೆ.ವೇಣುಗೋಪಾಲ್ ಬಳಾಂತೋಡು ಮುಖ್ಯ ಅತಿಥಿಯಾಗಿದ್ದರು. ಸುಳ್ಯ ಕರಯೋಗಂ ಅಧ್ಯಕ್ಷ ಚಂದ್ರಶೇಖರ ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು. ಗೌರವ ಡಾಕ್ಟರೇಟ್ ಪಡೆದ ಪಂಜ ಪಂಚಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್ ಆವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕೆಎನ್‍ಎಸ್‍ಎಸ್ ಸುಳ್ಯ ಕರಯೋಗಂ ಮಾಹಿತಿ ಡೈರಿಯನ್ನು ಬಿಡುಗಡೆಗೊಳಿಸಲಾಯಿತು.
ರಿಯಾಲಿಟಿ ಶೋ ಪ್ರತಿಭೆ ವೈಷ್ಣವಿ, ಸ್ಕೌಟ್ ಪುರಸ್ಕಾರ ಪಡೆದ ಶ್ರೀಲಾಲ್, ಸಂಗೀತದಲ್ಲಿ ಡಿಸ್ಟಿಂಕ್ಷನ್ ಪಡೆದ ಶ್ರೀಲಯ, ಇಂಟಿಗ್ರೇಟೆಡ್ ಪಿಎಚ್‍ಡಿಗೆ ಆಯ್ಕೆಗೊಂಡ ಅಭಿಜ್ಞಾ ಕುತ್ತಮೊಟ್ಟೆಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಂಗಳೂರು ಕರಯೋಗಂನ ರಾಜನ್ ನಂಬಿಯಾರ್ ಶುಭ ಹಾರೈಸಿದರು. ಸುಳ್ಯ ಕರಯೋಗಂ ಉಪಾಧ್ಯಕ್ಷ ಚಂದ್ರಶೇಖರ್ ನಾಯರ್ ಸುಬ್ರಹ್ಮಣ್ಯ, ಕೋಶಾಧಿಕಾರಿ ವಿಶ್ವನಾಥನ್ ನಾಯರ್, ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಪ್ರಭಾಕರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಿಕಾ ಚಂದ್ರಶೇಖರ್ ಪ್ರಾರ್ಥಿಸಿದರು. ಪೂರ್ವಾಧ್ಯಕ್ಷರಾದ ಪ್ರಭಾಕರನ್ ನಾಯರ್ ಸ್ವಾಗತಿಸಿ, ಬಾಲಕೃಷ್ಣನ್ ನಾಯರ್ ಪ್ರಸ್ತಾವನೆಗೈದರು. ದುರ್ಗಾಕುಮಾರ್ ನಾಯರ್ ಕೆರೆ ಅಭಿನಂದನಾ ಭಾಷಣಗೈದರು. ಕಾರ್ಯದರ್ಶಿ ಪ್ರಿಯರಂಜನ್ ನಾಯರ್ ವಂದಿಸಿದರು. ಅಂಬಿಕಾ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಓಣಂ ಕಾರ್ಯಕ್ರಮದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…