ಕಲಿಕೆ ಒತ್ತಾಯದಿಂದ ಹೇರುವ ಪ್ರಕ್ರಿಯೆ ಅಲ್ಲ : ರಮೇಶ್ ಉಳಯ

April 25, 2019
4:12 AM

ಪುತ್ತೂರು : ಕಲಿಕೆ ಎಂಬುವುದು ಒತ್ತಾಯದಿಂದ ಹೇರುವ ಪ್ರಕ್ರಿಯೆ ಅಲ್ಲ. ಅದು ಮಕ್ಕಳಲ್ಲಿ ಸಹಜವಾಗಿ ಮೂಡಿಬರಬೇಕಾದ ಪ್ರಕ್ರಿಯೆ. ಮಕ್ಕಳು ಸ್ವತಂತ್ರವಾಗಿ ಕಲಿತಾಗ ಮಾತ್ರ ಕಲಿಕೆ ಹೆಚ್ಚಿನ ಮೂರ್ತ ಸ್ವರೂಪ ಪಡೆದುಕೊಳ್ಳಲು ಸಾಧ್ಯ ಎಂದು ಸಾಹಿತಿ, ಸಂಜಯ ನಗರ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಉಳಯ ಅವರು ಹೇಳಿದರು.
ಪುತ್ತೂರು ತಾಲೂಕಿನ ಕೆಮ್ಮಿಂಜೆ ಸರಕಾರಿ ಶಾಲೆಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆರಂಭಗೊಂಡ ಬರ ಪೀಡಿತ ಪ್ರದೇಶಗಳಲ್ಲಿ ನಡೆಯುವ `ಸ್ವಲ್ಪ ಮೋಜು-ಸ್ವಲ್ಪ ಕಲಿಕೆ’ ಬೇಸಿಗೆ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶಾಲಿನಿ ಶೆಟ್ಟಿ ಅವರು ಉದ್ಘಾಟಿಸಿದರು.
ಕೆಮ್ಮಿಂಜೆ ಶಾಲಾ ಎಸ್‍ಡಿಎಂಸಿ ಸದಸ್ಯ ಗಣೇಶ್, ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಅವರು ಮಾತನಾಡಿದರು. ಸಾಮೆತ್ತಡ್ಕ ಶಾಲಾ ಶಿಕ್ಷಕಿ ಪ್ರಶಾಂತಿ, ನೆಲ್ಲಿಕಟ್ಟೆ ಶಾಲಾ ಸಂಗೀತ ಶಿಕ್ಷಕ ಭಗವಂತ ಮತ್ತಿತರರು ಉಪಸ್ಥಿತರಿದ್ದರು. ಬೇಸಿಗೆ ಶಿಬಿರದ ನೋಡೆಲ್ ಶಿಕ್ಷಕಿ ಅರ್ಚನಾ ವಂದಿಸಿದರು. ಶಿಬಿರದ ನೋಡೆಲ್ ಶಿಕ್ಷಕಿ ಸುಮತಿ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ
ಎಳೆಯ ಮನಸುಗಳಲ್ಲಿ ಪರಿಸರ ಜಾಗೃತಿ ಮೂಡಿದರೆ ಮಾತ್ರ ಸ್ವಚ್ಛ ಭವಿಷ್ಯ ನಿರ್ಮಾಣ
June 21, 2026
3:16 PM
by: ದ ರೂರಲ್ ಮಿರರ್.ಕಾಂ
ಅಡಿಕೆ-ಕಾಳುಮೆಣಸು ಬೆಳೆವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ – ದಕ್ಷಿಣ ಕನ್ನಡ ರೈತರಿಗೆ ಮಹತ್ವದ ಮಾಹಿತಿ
June 20, 2026
11:17 PM
by: ದ ರೂರಲ್ ಮಿರರ್.ಕಾಂ
ನಾಳೆ ನೀಟ್ ಪರೀಕ್ಷೆ- ದ.ಕ. ಜಿಲ್ಲೆಯಲ್ಲಿ 5570 ಅಭ್ಯರ್ಥಿಗಳು – ದ.ಕ. ಜಿಲ್ಲೆಯಲ್ಲಿ ಬಿಗು ಭದ್ರತೆ, 12 ಕೇಂದ್ರಗಳಲ್ಲಿ ಪರೀಕ್ಷೆ
June 19, 2026
8:35 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror