Advertisement
ಸುದ್ದಿಗಳು

ಕಲೆಯಲ್ಲಿ ಹೊಸದೊಂದು ಅಪವಾದಕ್ಕೆ ಕಾರಣವಾದ “ಕಟೀಲು ಮೇಳ”

Share

ಮಂಗಳೂರು: ಕಟೀಲು ಮೇಳದಲ್ಲಿ  ಏನಾಗುತ್ತಿದೆ..? ಹೀಗೊಂದು ಚರ್ಚೆಯಾಗುತ್ತಿರುವಾಗಲೇ ಇದೀಗ ಹೊಸದೊಂದು ಅಪವಾದಕ್ಕೆ ಕಟೀಲು ಮೇಳ ಎಡೆಮಾಡಿಕೊಟ್ಟಿದೆ. ಇದುವರೆಗಿನ ತಿಳಿದ ಇತಿಹಾಸದಲ್ಲಿ ಕಲಾವಿದನೊಬ್ಬನನ್ನು ರಂಗಸ್ಥಳದಿಂದ ಅರ್ಧದಿಂದ ಇಳಿಸಿದ ಉದಾಹರಣೆಯೇ ಇಲ್ಲ. ಹೀಗಿರುವಾಗ ಮೇಳದಲ್ಲಿ  ಹೊಸದೊಂದು ಅಪವಾದ ಸೃಷ್ಟಿಸಿದ್ದು ಹರಕೆಯಾಟ ಆಡಿಸುವ ಭಕ್ತಾದಿಗಳೂ ಚರ್ಚೆ ಮಾಡುವುದಕ್ಕೆ ಆರಂಭ ಮಾಡಿದ್ದಾರೆ. ಹಾಗಿದ್ದರೆ ಈ ಚರ್ಚೆಗೆ ಕಾರಣವಾದ್ದು ಯಾವುದು ?

ನ.22 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 6 ಯಕ್ಷಗಾನ ಮೇಳಗಳ 2019 -2020 ಸಾಲಿನ ತಿರುಗಾಟಕ್ಕೆ ಚಾಲನೆ ನೀಡಲಾಗಿತ್ತು. ಅಂದು ಅಲ್ಲಿ ಆರು ಮೇಳದ ಕಲಾವಿದರೂ ಯಕ್ಷಗಾನದಲ್ಲಿ ಭಾಗವಹಿಸುತ್ತಾರೆ ಮತ್ತು ಮೇಳದ ಎಲ್ಲಾ ಭಾಗವತರು ಭಾಗವತಿಕೆ ನಡೆಸುವುದು ಅಲ್ಲಿ ನಿರಂತರವಾಗಿ ನಡೆದು ಬರುತ್ತಿರುವ ಸಂಪ್ರದಾಯ. ಶುಕ್ರವಾರವೂ ಆರು ಭಾಗವತರು ಭಾಗವತಿಕೆ ಮುಗಿಸಿದ್ದು, ಬಳಿಕ ಪುತ್ತೂರಿನ ರಮೇಶ್ ಭಟ್ ಅವರು ಭಾಗವತಿಕೆ ನಡೆಸುತ್ತಿದ್ದರು. ಆ ಸಂದರ್ಭ ಭಾಗವತಿಕೆ ಮಾಡಲು ಪಟ್ಲ ಸತೀಶ್ ಶೆಟ್ಟಿಯವರು ರಂಗ ಸ್ಥಳಕ್ಕೆ ಬಂದಿದ್ದು, ರಮೇಶ್ ಭಟ್ ಅವರು ಪಟ್ಲರಿಗೆ ಭಾಗವತಿಕೆ ನಡೆಸಲು ಅವಕಾಶ ಮಾಡಿ ವೇದಿಕೆ ಬಿಟ್ಟು ಕೊಟ್ಟರು. ಆ ಸಂದರ್ಭ ಬಂದ ಮೇಳದ ವ್ಯವಸ್ಥಾಪಕ ಹಾಗೂ ಅವರ ತಂಡ ಸತೀಶ್ ಶೆಟ್ಟಿ ಪಟ್ಲ ಅವರನ್ನು ಭಾಗವತಿಕೆ ಮಾಡದಂತೆ ತಿಳಿಸಿ ರಂಗ ಸ್ಥಳದಿಂದ ಹೊರನಡೆಯುವಂತೆ ತಿಳಿಸಿದರು ಎನ್ನಲಾಗಿದೆ. ಇಷ್ಟಾಗುವ ವೇಳೆಗೆ ರಾತ್ರಿ 1.30. ಈ ಮೂಲಕ ಯಕ್ಷಲೋಕದಲ್ಲಿ  ಪ್ರಥಮ ಬಾರಿಗೆ ಇಂತಹದ್ದೊಂದು ಅಪವಾದಕ್ಕೆ ಕಟೀಲು ಮೇಳ ಸಾಕ್ಷಿಯಾಯಿತು.

ಪಟ್ಲ ಸತೀಶ್ ಶೆಟ್ಟಿ

 

ಮೇಳದ ತಿರುಗಾಟ ಆರಂಭ ಹಿನ್ನೆಲೆ ದೇಗುಲ ಆವರಣದಲ್ಲಿ ಯಕ್ಷಗಾನ ಏರ್ಪಡಿಸಲಾಗಿತ್ತು. ಈ ಹಿಂದೆ ಕಟೀಲು ಮೇಳದ ವಿವಾದವು ಹೈಕೋರ್ಟ್ ಮೆಟ್ಟಿಲೇರಿತ್ತು. ಇಲ್ಲಿ ಮೇಲದ ಯಜಮಾನ ಹಾಗೂ ಕಲಾವಿದರ ನಡುವೆ ವಿವಾದ ಇತ್ತು.  ಎರಡು ದಿನಗಳ ಹಿಂದಷ್ಟೇ ತೀರ್ಪು ಪ್ರಕಟವಾಗಿತ್ತು. ಮೇಳದ ಕಲಾವಿದರ ಪರವಾಗಿ ತೀರ್ಪು ಪ್ರಕಟವಾಗಿತ್ತು .ಇದನ್ನು ಪ್ರಶ್ನಿಸಿ ದೇವಸ್ಥಾನದ ಆಡಳಿತ ಮೊಕ್ತೇಸರರು ಕೋರ್ಟ್ ಮೆಟ್ಟಿಲು ಏರಿದ್ದರು. ಎರಡು ದಿನಗಳ ಹಿಂದೆ ಇದರ ಬಗ್ಗೆ ಕೋರ್ಟ್ ಮದ್ಯಂತರ ಆದೇಶ ಜಾರಿ ಮಾಡಿದ್ದು ಸದ್ಯ ಮೇಳಗಳು ಯಥಾ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕು ,ಮೇಳದ ಲೆಕ್ಕಪತ್ರಗಳ ಬಗ್ಗೆ ದಕ ಜಿಲ್ಲಾಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದು ಆದೇಶ ನೀಡಿತ್ತು .

ಕಲಾವಿದರ  ಹಿಂದೆ ಪಟ್ಲ ಸತೀಶ್ ಶೆಟ್ಟಿಯವರು ಇದ್ದಾರೆ ಎಂಬ ಆಧಾರ ರಹಿತ ಅಪವಾದದ ಕಾರಣದಿಂದ ಹೀಗ ಅಪಮಾನ ಮಾಡಿದ್ದಾರೆ ಎಂದು ಸಾರ್ವಜನರಿಕರು  ಹೇಳುತ್ತಾರೆ. ಇದರಿಂದಾಗಿ ಕಲೆಗೆ ಹಾಗೂ ಯಕ್ಷಗಾನ ಲೋಕಕ್ಕೆ ಅಪಮಾನವಾಗಿದೆ ಎಂದು ಹಿರಿಯ ಕಲಾವಿದರು ನೋವು ತೋಡಿಕೊಳ್ಳುತ್ತಾರೆ. ಯಾವುದೇ ಜಗಳ ಇದ್ದರೂ ರಂಗಸ್ಥಳದಲ್ಲಿ  ತೋರಿಸಬಾರದು ಎಂಬುದು  ಹಿರಿಯ ಕಲಾವಿದರ ಅಭಿಪ್ರಾಯ.ಒಂದು ವೇಳೆ ಸತೀಶ್ ಪಟ್ಲ ಅವರನ್ನು  ಈ ಬಾರಿ ಕೈಬಿಡುವುದಾದರೆ ಮೊದಲೇ ಹೇಳಬೇಕಾಗಿತ್ತು. ರಂಗಸ್ಥಳಕ್ಕೆ ಬಂದ ಬಳಿಕ ಅಪಮಾನ ಸರಿಯಲ್ಲ ಎಂಬುದು ಹಿರಿಯ ಕಲಾವಿದರ ಅಭಿಪ್ರಾಯ.

ಇದೀಗ ಪಟ್ಲ ಅಭಿಮಾನಿಗಳು ಪಟ್ಲ ಫೌಂಡೇಶನ್ ವತಿಯಿಂದ ಸಭೆ ನಡೆಸಲಾಗುತ್ತಿದ್ದು  ಸಂಜೆ 4-00 ಗಂಟೆಗೆ ಹೋಟೆಲ್ ಜನತಾ ಡಿಲೆಕ್ಸ್ ಸಭಾಂಗಣದಲ್ಲಿ ಸಭೆ ನಡೆಯಲಿದೆ, ಮುಂದೆ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ.

 

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

10 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

18 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

19 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

20 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago