ಸುಳ್ಯ: ಕಲ್ಮಕಾರಿನ ತೋಟದಲ್ಲಿ ಗಂಡು ಮರಿಯಾನೆಯ ಶವ ಪತ್ತೆಯಾಗಿದೆ. ಕೊಳೆತ ರೀತಿಯಲ್ಲಿ ಪತ್ತೆಯಾದ ಆನೆ ಸಾವಿಗೆ ಕಾರಣ ಏನು ಎನ್ನುವ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.

ಮರಿ ಆನೆಯ ಶವ ಕಲ್ಮಕಾರಿನ ಕೋಪಡ್ಕದ ಸತೀಶ್ ಗೌಡ ಎನ್ನುವವರ ತೋಟದಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಆನೆಯ ಶವದ ಮಹಜರನ್ನೂ ನಡೆಸಲಾಗಿದ್ದು, ಆನೆ ಸಾವನ್ನಪ್ಪಿ ನಾಲ್ಕು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




