ಮಲೆನಾಡು ಭಾಗಗಳಲ್ಲಿ ಮಳೆಗಾಲದ ಅವಧಿಯಲ್ಲಿ ವಿಷಕಾರಿ ಹಾವುಗಳು ಅಲ್ಲಲ್ಲಿ ಕಾಣುತ್ತದೆ. ಹಾವು ಕಂಡಾಕ್ಷಣ ಆ ಕಡೆ ಈ ಕಡೆ ನೋಡದೆ ಅದು ವಿಷ ಹಾವು ಎಂದು ಹೊಡೆದು ಸಾಯಿಸುವವರು ಅನೇಕರು. ಆದರೆ ಪರಿಸರದಲ್ಲಿ ಎಲ್ಲಾ ವಿಧದ ಪ್ರಾಣಿಗಳು, ಉರಗಗಳು ಅಗತ್ಯವಿದೆ. ಈ ಕಾರಣದಿಂದ ಉರಗ ಪ್ರೇಮಿಗಳು, ಪರಿಸರ ಪ್ರೇಮಿಗಳು ಆಗಾಗ ಜಾಗೃತಿ ಮೂಡಿಸುತ್ತಿರುತ್ತಾರೆ.
ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಕುಂಞಿಹಿತ್ಲು ಪ್ರದೇಶದಲ್ಲಿ Hump nosed pit viper (ವಿಷಕಾರಿ ಕಂದಡಿ ಹಾವು) ಕಂಡುಬಂದಿತ್ತು. ಇದು ಅತ್ಯಂತ ವಿಷಕಾರಿ. ಇದನ್ನು ಕುಂಞಿಹಿತ್ಲು ಗಣೇಶ್ ಅವರು ಹಾವು ಕಂಡೊಡನೆ ಸುರಕ್ಷಿತವಾಗಿ ಹಿಡಿದು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.
ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕೆ ಅವರು ಈ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.






Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel