ಸುಳ್ಯ: ರಬ್ಬರ್, ಅಡಿಕೆ ಬೆಳೆಗಳ ಜತೆಯಲ್ಲಿ ನಾನಾ ತಳಿಯ ಹಣ್ಣುಗಳ ಕೃಷಿಗೆ ಒತ್ತು ನೀಡಿದ್ದಾಗ ಕೃಷಿಕನ ಬದುಕು ಹಸನಾಗುತ್ತದೆ ಎಂದು ಪ್ರಗತಿಪರ ಹಣ್ಣುಗಳ ಕೃಷಿಕ ಅನಿಲ್ ಬಳಂಜ ಹೇಳಿದರು.
ಅವರು ಕಲ್ಮಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಅಂಗವಾಗಿ ಭಾನುವಾರ ನಡೆದ ಅಡಿಕೆ ಮತ್ತು ಸಾಂಪ್ರಾಯಿಕ ಕೃಷಿ ಬೆಳೆಗಳಿಗೆ ಪರ್ಯಾಯವಾಗಿ ನಾನಾ ತಳಿಯ ಹಣ್ಣು ಹಂಪಲುಗಳನ್ನು ಬೆಳೆಸುವ ಕುರಿತು ಕೃಷಿ ವಿಚಾರ ಸಂಕಿರಣದಲ್ಲಿ ಸಂನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು. ವಿಶಿಷ್ಟ ತಳಿಯ ಹಣ್ಣುಗಳಿಗೆ ಸಾಕಷ್ಟು ಬೇಡಿಕೆ ಇದೆ. ಅಡಿಕೆ, ರಬ್ಬರ್ ಗಿಂತ ಅಧಿಕ ಇಳುವರಿಯನ್ನು ಪಡೆದು, ಲಾಭಾಂಶವನ್ನು ಪಡೆಯಬಹುದು. ಜತೆಗೆ ಹಣ್ಣಿನ ಬೀಜದಲ್ಲೂ ಆಧಾಯಗಳಿಸಬಹುದು ಎಂದು ಅನಿಲ್ ಬಳಂಜ ಹೇಳಿದರು.
ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಕೆ.ಎನ್.ಪರಮೇಶ್ವರಯ್ಯ ವಹಿಸಿದರು. ಕಾರ್ಯಕ್ರಮವನ್ನು ಎ.ಒ.ಎಲ್.ಇ ನಿರ್ದೇಶಕ ಅಕ್ಷಯ್ ಕೆ.ಸಿ. ಉದ್ಘಾಟಿಸಿದರು. ರಕ್ತದಾನದ ಬಗ್ಗೆ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾಹಿತಿ ನೀಡಿದರು.
ಮುಖ್ಯಅತಿಥಿಗಳಾಗಿ ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸಂತೋಷ್ ಕುತ್ತಮೊಟ್ಟೆ, ವೈದ್ಯರುಗಳಾದ ಡಾ.ಈಶ್ವರಯ್ಯ ಜಿ., ಡಾ.ಶಶಿಧರ್ ಪಡೀಲ್, ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಮೂರ್ತಿ, ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ನಡ್ಕ ಅತಿಥಿಗಳಾಗಿದ್ದರು ವೇದಿಕೆಯಲ್ಲಿ ಕಲ್ಮಡ್ಕ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಜೋಷಿ, ಉಪಾಧ್ಯಕ್ಷ ಗಂಗಾಧರ ಗೌಡ ಅಕ್ರಿಕಟ್ಟೆ, ಸಮಿತಿಯ ಗೌರವಾಧ್ಯಕ್ಷ ಕೆ.ಕೆ.ನಾರಾಯಣ ಚಳ್ಳಂಗಾರು, ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ನಡ್ಕ, ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳಾದ ಶಂಕರ ನಾರಾಯಣ ಭಟ್, ಮಹಾಬಲ ಕೆ., ಸುಧಾ ಎಸ್.ಭಟ್, ಲಲಿತಾ ಪಿ., ಮಹಮ್ಮದ್ ಹನೀಫ್, ರಾಮನಾಯ್ಕ ಯು., ಕರುಣಾಕರ ಜೆ. ಇದ್ದರು. ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತ ವರ್ಗೀಕರಣ ಶಿಬಿರ ನಡೆಯಿತು.
ವಿಚಾರ ಸಂಕಿರಣ: ಕಲ್ಮಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಅಂಗವಾಗಿ ನಡೆದ ಕೃಷಿ ವಿಚಾರ ಸಂಕಿರಣ-ಆರೋಗ್ಯ ತಪಾಸಣಾ ಶಿಬಿರವನ್ನು ಅಕ್ಷಯ್ ಕೆ.ಸಿ.ಉದ್ಘಾಟಿಸಿದರು.