ಕಲ್ಮಡ್ಕ : ಕಲ್ಮಡ್ಕ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಡ್ಪಿನಂಗಡಿಯ ಶಿವಗೌರಿ ಕಲಾಮಂದಿರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಧರ್ಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ತೋಟಗಾರಿಕಾ ಇಲಾಖೆಯ ವತಿಯಿಂದ ಹವಾಮಾನದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸರಕಾರದಿಂದ ದೊರೆಯುವ ನಷ್ಟ ಪರಿಹಾರದ ಕುರಿತು ಮಾಹಿತಿ ನೀಡಿದರು. ಕೊಳೆ ರೋಗಕ್ಕೆ ಪರಿಹಾರೋಪಯವನ್ನು ಸಭೆಯಲ್ಲಿ ತಿಳಿಸಲಾಯಿತು. ತೋಟಗಾರಿಕಾ ಇಲಾಖೆ ವತಿಯಿಂದ ದೊರೆಯುವ ಗಿಡಗಳು, ಜೇನು ಕೃಷಿಗೆ, ಬಾಳೆ ಕೃಷಿಗೆ ಸಬ್ಸಿಡಿ ಹಾಗು ಕಾಳು ಮೆಣಸಿನ ಕೃಷಿಗೆ ದೊರೆಯುವ ಸಹಾಯ ಧನದ ಕುರಿತು ಸಮಗ್ರವಾಗಿ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಲಾಯಿತು.
ಹಿಂದುಳಿದ ವರ್ಗಕ್ಕೆ ಸ್ವ ಉದ್ಯೊಗ ಸೃಷ್ಠಿ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕಿನಲ್ಲಿ ಇಂದು ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ವರ್ಗದ ವಿದ್ಯಾರ್ಥಿಗಳಿಗೆಂದೆ 11 ಹಾಸ್ಟೆಲ್‍ಗಳಿವೆ. ಒಂದನೆ ತರಗತಿಯಿಂದ ಏಳನೆ ತರಗತಿ ವಿದ್ಯಾರ್ಥಿಗಳಿಗೆ 1000 ಸಾವಿರ ರೂಪಾಯಿ ಹಾಗು 8ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗಿನ ವಿದ್ಯಾರ್ಥಿಗಳಿಗೆ 2000 ಸಾವಿರ ರೂಪಾಯಿಗಳಂತೆ ವಿದ್ಯಾರ್ಥಿ ವೇತನವನ್ನು ಇಲಾಖೆಯಿಂದ ನೀಡಲಾಗುತ್ತಿದೆ.
ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ನೀಡುವ ಕುರಿತು:
ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ ಕೃಷಿ ಭಾಗ್ಯ ಯೋಜನೆಗೆ ಸರಕಾರದಿಂದ 2ಲಕ್ಷ ರೂಪಾಯಿ ತಾಲೂಕಿಗೆ ದೊರೆತಿದೆ. ಸಾರ್ವಜನಿಕರು ಕೃಷಿ ಹೊಂಡ ನಿರ್ಮಾಣಕ್ಕೆ ಪಂಚಾಯತ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಿಂದುಳಿದ ವರ್ಗದವರಿಗೆ 1ಲಕ್ಷ ರೂಪಾಯಿ ಹಾಗು ಸಾಮಾನ್ಯರಿಗೆ 50000 ಸಾವಿರ ಸಾಹಯಧನ ದೊರೆಯುವುದಾಗಿ ಅಧಿಕಾರಿ ಹೇಳಿದರು.
ಕಾನೂನು ಪಾಲನೆಯ ಕುರಿತು ಪೊಲೀಸರಿಂದ ಮಾಹಿತಿ:
ಕಾನೂನು ಪರಿಪಾಲನೆಯ ಕುರಿತು ಮಾತನಾಡುತ್ತಾ ಬೆಳ್ಳಾರೆ ಠಾಣೆಯ ಪ್ರೊಬೇಷನರಿ ಎಸ್.ಐ ಆಂಜನೇಯ ರೆಡ್ಡಿಯವರು ಕಾನೂನು ನಿರ್ಧರಿಸಿದಂತೆ ರಿಕ್ಷಗಳಲ್ಲಿ ನಿಗದಿಪಡಿಸಿದಂತೆ 4 ಕ್ಕಿಂತ ಹೆಚ್ಚಿನ ಜನರನ್ನು ಹೇರಿಕೊಂಡು ಚಲಾಯಿಸಿದರೆ ಅಂಥವರ ಚಾಲನಾ ಪರವಾನಿಗೆಯನ್ನು 4 ತಿಂಗಳು ಅಮಾನತಿನಲ್ಲಿಡಲಾಗುವುದು ಎಂದರು. ಅಂತಯೆ ಹಲವಾರು ಬಾರಿ ಮಾನವೀಯ ನೆಲೆಯಲ್ಲಿ ಪೊಲೀಸ್ ಇಲಾಖೆಯವರು ವಾಹನ ಸವಾರರ ಪರಿಸ್ಥಿತಿಯನ್ನು ಅರಿತು ನಡೆದುಕೊಳ್ಳುತ್ತಾರೆ ಎಂದು ಹೇಳಿದರು. ಗ್ರಾಮಸ್ಥ ಜಯರಾಮ್ ಗಾಂಜಾದಂತಹ ಪ್ರಕರಣದಲ್ಲಿ ದಯವಿಟ್ಟು ಮಾನವೀಯತೆ ತೋರದಿರಿ ಎಂದು ವಿನಂತಿಸಿದರು.
ಗ್ರಾಮ ಪಂಚಾಯತ್‍ನಲ್ಲಿಯೇ ಆಧಾರ್ ತಿದ್ದುಪಡಿ ನಡೆಸುವಂತೆ, ಕಲ್ಮಡ್ಕ ಭಾಗದಲ್ಲಿ ಎಟಿಎಂ ಅಳವಡಿಸುವಿಕೆ ಬಗ್ಗೆ, ಪಡ್ಪಿನಂಗಡಿ ಸರ್ಕಾರಿ ಶಾಲೆಗೆ ಆಮಗ್ಲ ಭಾಷೆಗೆ ಶಿಕ್ಷಕರ ನೇಮಕ ಕುರಿತು ಗ್ರಾಮಸ್ಥರು ಆಗ್ರಹಿಸಿದರು.
ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಾರಿಜ ಪಿ.ಎಸ್, ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಲಕ್ಷ್ಮೀಶ ರೈ ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…