Advertisement
ಸುದ್ದಿಗಳು

ಕಲ್ಮಡ್ಕ ದೊಡ್ಡತೋಟ ರಸ್ತೆಗಿಲ್ಲ ಬಸ್ ಭಾಗ್ಯ…!

Share

ಪಾಜಪಳ್ಳದಿಂದ ಕಲ್ಮಡ್ಕ ಗ್ರಾಮದ ಮೂಲಕ ಅಮರಮೂಡ್ನೂರು, ದೊಡ್ಡತೋಟ ಮೂಲಕ ಸುಲಭವಾಗಿ ಸುಳ್ಯಕ್ಕೆ ತಲುಪಬಹುದಾದ ಈ ರಸ್ತೆಯಲ್ಲಿ ಕಲ್ಮಡ್ಕದಿಂದ ಸುಳ್ಯಕ್ಕೆ ಬಸ್ ಬೇಕೆಂದು ಮನವಿ ಮಾಡಿದರೂ ಬಸ್ಸಿನ ವ್ಯವಸ್ಥೆಯಾಗಿಲ್ಲವೆಂದು ಸಾರ್ವಜನಿಕರು ಈಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement

ಸುಳ್ಯ ಮತ್ತು ಪುತ್ತೂರು ಡಿಪೋದಿಂದ 9 ಬಸ್ಸುಗಳು ಕಲ್ಮಡ ತನಕ ಬರುತ್ತದೆ. ಅಯ್ಯನಕಟ್ಟೆ ಕಳಂಜ ಮಾರ್ಗವಾಗಿಯೂ ಕುಕ್ಕುಜಡ್ಕ, ಅಮರಪಡ್ನೂರಿಗೆ ಸೀಮಿತ ಸಂಖ್ಯೆಯ ಬಸ್ಸುಗಳಿವೆ. ಆದರೆ ಕಲ್ಮಡ್ಕ ಕುಕ್ಕುಜಡ್ಕ ಮಾರ್ಗವಾಗಿ ಯಾವುದೇ ಬಸ್ಸುಗಳ ಸೌಲಭ್ಯವಿಲ್ಲ. ಕಲ್ಮಡ್ಕದ ಮುಂದೆ ಮತ್ತಿಗುಡ್ಡೆ, ಹಾಸನಡ್ಕ, ಉರುಂಬಿ ಸೇರಿದಂತೆ ಮುಂತಾದ ಊರುಗಳು ಸಿಗುತ್ತವೆ. ಆ ಊರಿನ ಜನರು ಸರಕಾರಿ ಬಸ್ಸುಗಳನ್ನು ಹಿಡಿಯಬೇಕಾದರೆ 5 ಕಿ.ಮಿ ನಡೆದುಕೊಂಡು ಬರಬೇಕಾಗುತ್ತದೆ. ಅದೂ ಅಲ್ಲದೆ ಈ ಭಾಗದ ರಸ್ತೆಯಲ್ಲಿ ಯಾವುದೇ ಖಾಸಗಿ ಟೆಂಪೊ, ಜೀಪು, ಕಮಾಂಡರುಗಳ ಓಡಾಟವಿರುವುದಿಲ್ಲ.
ಕಲ್ಮಡ್ಕ, ಅಮರಮೂಡ್ನುರು, ಮುಪ್ಪೇರ್ಯ ಗ್ರಾಮಗಳನ್ನು ಒಳಗೊಂಡ ನೂರಾರು ಜನರು ನಿತ್ಯ ಓಡಾಟ ನಡೆಸುವ ಈ ರಸ್ತೆಯಲ್ಲಿ ಸರ್ಕಾರಿ ಬಸ್ ಸೌಕರ್ಯದಿಂದ ವಂಚಿತವಾಗಿದೆ. ಕಲ್ಮಡದವರಿಗೆ ತಾಲೂಕು ಕೇಂದ್ರವಾದ ಸುಳ್ಯಕ್ಕೆ ಹೋಗಬೇಕಾದರೆ ಪಾಜಪಳ್ಳ ಮೂಲಕ ಬೆಳ್ಳಾರೆಗೆ ಬರಲೇಬೇಕು. ಸುಳ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿಗೆ, ನ್ಯಾಯಾಲಯಕ್ಕೆ ಬರಬೇಕಾದರೆ ಸುತ್ತು ಬಳಸಿ ಬರಬೇಕಾಗುತ್ತದೆ. ನೂರಾರು ವಿದ್ಯಾರ್ಥಿಗಳು ಬಸ್‍ಪಾಸ್ ಮಾಡಿಸಿಕೊಂಡರೂ ಬಸ್ ಇಲ್ಲದೆ ಅದು ನಿಷ್ಪ್ರಯೋಜಕವಾಗಿದೆ.

Advertisement

ಈ ರಸ್ತೆಯ ಮೂಲಕ ಸರಕಾರಿ ಬಸ್ ಸೌಲಭ್ಯಕ್ಕಾಗಿ ಹಲವು ಬಾರಿ ಶಾಸಕರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಇದುವರೆಗೂ ಪ್ರತಿಕ್ರಿಯೆ ದೊರೆತಿಲ್ಲವೆಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಡಿಪೋಗೆ ಮನವಿ ಬಂದಿಲ್ಲ. ಮನವಿ ಬಂದಲ್ಲಿ ಪರಿಶೀಲಿಸಿ ವಿಭಾಗೀಯ ಕಚೇರಿಗೆ ತಲುಪಿಸುತ್ತೇವೆ. ಇದು ಹೊಸ ರೂಟ್ ಆದ ಕಾರಣ ಬೇಡಿಕೆಯ ಕುರಿತು ಪರಿಶೀಲಿಸಬೇಕಿದೆ ಎಂದು ಹೇಳುತ್ತಾರೆ ಸುಳ್ಯ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ ಸುಂದರ್‍ರಾಜ್.

Advertisement

ಸಮರ್ಪಕವಾದ ರಸ್ತೆಯಿದ್ದರೂ ಇಲ್ಲಿ ಬಸ್ ಓಡಾಟವಿಲ್ಲ. ದಿನದಲ್ಲಿ ಕನಿಷ್ಠ ಮೂರು ಬಾರಿಯಾದರೂ ಬಸ್ ಓಡಾಟ ನಡೆಸಿದರೆ ಸುಳ್ಯಕ್ಕೆ ಹೋಗುವವರಿಗೆ ಅನುಕೂಲವಾಗಬಹುದು ಎಂದು ಹೇಳುತ್ತಾರೆ ಕಲ್ಮಡ್ಕದ ಭಾಸ್ಕರ. 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

18 hours ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

1 day ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

4 days ago