ಸುಳ್ಯ: ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಮತ್ತು ಸಂಘದ ಸೋಲಾರ್ ಅಳವಡಿಕೆಯನ್ನು ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಶಾಸಕ ಎಸ್.ಅಂಗಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಉದ್ಘಾಟಿಸಿದರು. ಕೃಷಿ ವಸ್ತು ಪ್ರದರ್ಶನವನ್ನು ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಇಂಟರ್ ಲಾಕ್ ಆಳವಡಿಕೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಕೆ.ಎಸ್. ದೇವರಾಜ್, ಜಿ.ಪಂ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ತಾ.ಪಂ ಸದಸ್ಯ ಅಬ್ದುಲ್ ಗಫೂರ್, ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಜಿಲ್ಲಾಧ್ಯಕ್ಷ ಪಿ.ಬಿ.ದಿವಾಕರ ರೈ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್.ಬಿ.ನಾಯಕ್, ಕಲ್ಮಡ್ಕ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಉಡುವೆಕೋಡಿ ಸುಬ್ಬಪ್ಪಯ್ಯ, ಜಾಕೆ ಮಾಧವ ಗೌಡ, ಬಾಲಕೃಷ್ಣ ಗೌಡ ಮೂಲೆಮನೆ, ಕೆ.ಎಸ್.ಯಶೋಧಾ, ಮುಖ್ಯ ಅತಿಥಿಗಳಾಗಿದ್ದರು.
ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕ ಮಹೇಶ್.ಕೆ, ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಪಿ.ಸಿ.ಜಯರಾಮ, ರಾಜೀವಿ ಆರ್ ರೈ, ಕೆ.ಸಿ.ನಾರಾಯಣ ಗೌಡ, ಚಂದ್ರಶೇಖರ ಶಾಸ್ತ್ರಿ, ವಿಷ್ಣು ಭಟ್, ರಾಮಕೃಷ್ಣ ರೈ, ಮುಳಿಯ ಕೇಶವ ಭಟ್, ಸೋಮಶೇಖರ ಕೊಯಿಂಗಾಜೆ, ಮಹೇಶ್ ಕುಮಾರ್ ಕರಿಕ್ಕಳ, ಸಂತೋಷ್ ಕುತ್ತಮೊಟ್ಟೆ, ರವೀಂದ್ರ ರುದ್ರಪಾದ, ಕೃಪಾಶಂಕರ ತುದಿಯಡ್ಕ, ಗಂಗಾಧರ ರೈ ಪುಡ್ಕಜೆ, ಇಸ್ಮಾಯಿಲ್ ಕೆ.ಎಂ, ಗೌರವ ಅತಿಥಿಗಳಾಗಿದ್ದರು.
ಕಲ್ಮಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಉದಯ ಕುಮಾರ್ ಬೆಟ್ಟ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಜೋಷಿ.ಕೆ ವರದಿ ವಾಚಿಸಿದರು. ಉಪಾಧ್ಯಕ್ಷ ಎ.ಗಂಗಾಧರ ಗೌಡ, ನಿರ್ದೇಶಕರಾದ ಕೆ.ಶಂಕರನಾರಾಯಣ ಭಟ್, ಲಕ್ಷ್ಮೀನಾರಾಯಣ ನಡ್ಕ, ಮಹಾಬಲ.ಕೆ, ಸುಧಾ ಎಸ್.ಭಟ್, ಲಲಿತ.ಪಿ, ಮಹಮ್ಮದ್ ಹನೀಫ್, ರಾಮನಾಯ್ಕ.ಯು, ಕರುಣಾಕರ.ಜೆ, ಸಹಕಾರ ಸಂಘಗಳ ವಲಯ ಮೇಲ್ವಿಚಾರಕ ಪ್ರದೀಪ್ ಕೆ ಉಪಸ್ಥಿತರಿದ್ದರು.
ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಲ್ಮಡ್ಕ ಸಹಕಾರಿ ಸಂಘಗಳ ಪೂರ್ವಾಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.