Advertisement
ಕಾರ್ಯಕ್ರಮಗಳು

ಕಲ್ಲಪಳ್ಳಿಯಲ್ಲಿ ಆದರ್ಶ ಸಭಾಭವನ ಉದ್ಘಾಟನೆ- ಉಪನ್ಯಾಸ, ಸಾಧಕರಿಗೆ ಗೌರವಾರ್ಪಣೆ

Share

ಸುಳ್ಯ: ಕಲ್ಲಪಳ್ಳಿಯ ಪೆರುಮುಂಡ ಆದರ್ಶ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ನೂತನ ಆದರ್ಶ ಸಭಾಭವನ ಉದ್ಘಾಟನೆಯು ಡಿ. 8ರಂದು ನಡೆಯಿತು.

Advertisement
Advertisement
Advertisement

ಬೆಳಿಗ್ಗೆ ಗಣಪತಿ ಹೋಮದ ಬಳಿಕ ಸಭಾಭವನದ ಉದ್ಘಾಟನೆ ನಡೆಯಿತು. ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ. ಉದ್ಘಾಟನೆ ನೆರವೇರಿಸಿದರು. ಕಲ್ಲಪಳ್ಳಿ ಕೂಟುಪಿಲಾವು ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ಅಧ್ಯಕ್ಷ ಎ.ಕೆ. ಸೋಮನಾಥ ಗೌಡ ಆಲುಗುಂಜ, ಅಯ್ಯಪ್ಪ ಸೇವಾ ಸಮಿತಿಯ ಬಿ.ಕೆ. ಜನಾರ್ದನ ಗುಂಡ್ಯ, ಪ್ರಗತಿಪರ ಕೃಷಿಕ ಬಿ.ಕೆ. ನಾರಾಯಣ ಪೆರುಮುಂಡ ಉಪಸ್ಥಿತರಿದ್ದರು.

Advertisement

ಉಪನ್ಯಾಸ, ಸನ್ಮಾನ: ಉದ್ಘಟನಾ ಸಮಾರಂಭದ ಅಂಗವಾಗಿ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಉಪನ್ಯಾಸ ನೀಡಿದರು. ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ., ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಮೋಹನ್‌ಚಂದ್ರ ನಡುಬೆಟ್ಟು ಅವರನ್ನು ಸನ್ಮಾನಿಸಲಾಯಿತು.

Advertisement

ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ರಾಜೇಶ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್‌ಕುಮಾರ್ ರೈ, ಪನತ್ತಡಿ ಗ್ರಾ.ಪಂ. ಸದಸ್ಯೆ ನಳಿನಾಕ್ಷಿ ದಾಮೋದರ ಪನೆಯಾಲ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಲ್ಲಪಳ್ಳಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಿ.ಎ ಮುಖ್ಯ ಅತಿಥಿಗಳಾಗಿದ್ದರು. ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಜಗದೀಶ ಪಿ.ವಿ., ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ದಾಸಪ್ಪ ಪೆರುಮುಂಡ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳಾದ ರವಿಕುಮಾರ್ ಸ್ವಾಗತಿಸಿ, ರಮೇಶ್ ಪೆರುಮುಂಡ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ಪೆರುಮುಂಡ ವಂದಿಸಿದರು.

ಉದ್ಘಾಟನೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಂಪಾಜೆ ವಲಯ ಹಾಗೂ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಕಲ್ಲಪಳ್ಳಿ ಒಕ್ಕೂಟಗಳ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ಶ್ರೀ ಮಾತಾ ಅಮೃತಾನಂದಮಯಿ ಸ್ವಸಹಾಯ ಸಂಘ ಮತ್ತು ಆದರ್ಶ ಮತ್ತು ಅಮ್ಮ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜ.10 ರಿಂದ ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 3ನೇ ಸುತ್ತಿನ ಎರಡನೇ ಹಂತದ ಕಂದು…

49 mins ago

ರಾಸಾಯನಿಕ ಕೃಷಿಯಿಂದಾಗುವ ಪರಿಣಾಮಗಳ ಬಗ್ಗೆ ಭಾರತದ ರೈತರಲ್ಲೂ ಅರಿವು | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್

ಭಾರತದಲ್ಲಿ ಪ್ರಸ್ತುತ, ಬಹುದೊಡ್ಡ ಪ್ರಮಾಣದಲ್ಲಿ ನೈಸರ್ಗಿಕ ವಿಧಾನದಲ್ಲಿ ಕೃಷಿ ಬೆಳೆಗಳ ಉತ್ಪಾದನೆ ಮಾಡಲಾಗುತ್ತಿದೆ.…

13 hours ago

ರಾಜ್ಯದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಳ ಕುರಿತು ಅಧ್ಯಯನ ನಡೆಸುವಂತೆ  ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ

ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಮೊತ್ತವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ…

13 hours ago

ನಕ್ಸಲರ ಶರಣಾಗತಿ ಹಿನ್ನೆಲೆ | ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆ

ರಾಜ್ಯದಲ್ಲಿ ಶರಣಾದ ನಕ್ಸಲರನ್ನು  ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. …

13 hours ago

ಬಳ್ಳಾರಿ ಜೈಲಿನಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಪರಿಶೀಲನೆ

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯ…

13 hours ago

ಮಂಗನ ಕಾಯಿಲೆ | ಪಂಚಾಯತ್‌ಗಳಲ್ಲಿ ಅರಿವು ಮೂಡಿಸಲು ಸಲಹೆ |

ಮಂಗನ ಕಾಯಿಲೆ-ಕೆಎಫ್‌ಡಿ ಕುರಿತು ಎಲ್ಲ ಪಂಚಾಯತ್‌ಗಳಲ್ಲಿ ಅರಿವು ಮೂಡಿಸಬೇಕು. ಹಾಗೂ ಮಲೆನಾಡಿನ ಭಾಗದಲ್ಲಿ…

13 hours ago