ಸುಳ್ಯ: ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಂಜ ಬಸ್ ತಂಗುದಾಣದ ದುಸ್ಥಿತಿಯ ಬಗ್ಗೆ ಸುಳ್ಯನ್ಯೂಸ್.ಕಾಂ ಬೆಳಗ್ಗೆ ವರದಿ ಮಾಡಿತ್ತು. ಈ ಬಗ್ಗೆ ತಕ್ಷಣವೇ ತಾಪಂ ಸದಸ್ಯೆ , ಸ್ಥಾಯಿಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಅವರು ಸ್ಪಂದಿಸಿ ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಹಾಗೂ ಪಿಡಿಒ ಅವರಲ್ಲಿ ವಿಚಾರಿಸಿದರು.
ಕಳಂಜ ಗ್ರಾಮ ಪಂಚಾಯತ್ 2019-20 ನೇ ಸಾಲಿನ 14ನೇ ಹಣಕಾಸಿನ ಕ್ರಿಯಾಯೋಜನೆಯಲ್ಲಿ ಬಸ್ಸು ನಿಲ್ದಾಣಗಳ ದುರಸ್ಥಿಗೆ ಹಣ ಕಾದಿರಿಸಿದ್ದು ಇದರಲ್ಲಿಯೇ ಕಳಂಜ ವಿಷ್ಣು ನಗರ ಬಸ್ ನಿಲ್ದಾಣದ ದುರಸ್ಥಿಯನ್ನು ಸಹ ಕೈಗೊಳ್ಳಲಾಗುವುದು ಎಂದು ಕಳಂಜ ಗ್ರಾಪಂ ಪಿಡಿಒ ಶ್ರೀಧರ್ ಕೆ. ಆರ್ ತಿಳಿಸಿದ್ದಾರೆ.
ಬಸ್ ನಿಲ್ದಾಣ ದುರಸ್ತಿ ಬಳಿಕ ಸ್ಥಳೀಯರು ಸ್ವಚ್ಛತೆ ಕಡೆಗೂ ಗಮನಹರಿಸಬೇಕಾಗಿದೆ ಎಂಬುದು ಸುಳ್ಯನ್ಯೂಸ್.ಕಾಂ ಕಾಳಜಿ. ಬೆಳಗ್ಗೆ ಪ್ರಕಟವಾದ ವರದಿಗೆ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತವಾಗಿ ಸಮಸ್ಯೆ ಪರಿಹಾರ ಹಾಗೂ ಸ್ಪಷ್ಟನೆಯೂ ದೊರೆತಿದೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?